alex Certify ಜೀವದ ಹಂಗು ತೊರೆದು ನೀರಿಗೆ ಹಾರಿ ಕಂದಮ್ಮನನ್ನ ರಕ್ಷಿಸಿದ ಪರೋಪಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗು ತೊರೆದು ನೀರಿಗೆ ಹಾರಿ ಕಂದಮ್ಮನನ್ನ ರಕ್ಷಿಸಿದ ಪರೋಪಕಾರಿ

ಸರೋವರದಲ್ಲಿ ಬಿದ್ದಿದ್ದ ಪುಟ್ಟ ಕಂದಮ್ಮನನ್ನ ರಕ್ಷಿಸಲು ಜೀವದ ಹಂಗನ್ನೂ ತೊರೆದ ವ್ಯಕ್ತಿ ನೀರಿಗೆ ಹಾರಿದ್ದು ಸಿನಿಮೀಯ ರೀತಿಯಲ್ಲಿ ಮಗುವನ್ನ ಪ್ರಾಣಾಪಾಯದಿಂದ ಕಾಪಾಡಿದ ಘಟನೆಯು ಮೇರಿಲ್ಯಾಂಡ್​ನಲ್ಲಿ ನಡೆದಿದೆ.

ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ 23 ತಿಂಗಳ ಹೆಣ್ಣು ಮಗು ಕಾರಿನಿಂದ ನೀರಿಗೆ ಬಿದ್ದಿದೆ. ಅಲ್ಲದೇ ಈ ಅಪಘಾತದಲ್ಲಿ ಇನ್ನು ಅನೇಕರು ಗಾಯಗೊಂಡಿದ್ದರು ಎಂದು ಪ್ರಕರಣ ಸಂಬಂಧ ಓಶಿಯನ್​​ ಸಿಟಿ ಅಗ್ನಿಶಾಮಕ ಸಿಬ್ಬಂದಿ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೆ ಪ್ರಕಟಿಸಿದ್ದಾರೆ.

ಬ್ರಿಡ್ಜ್​​​ನ ಬಳಿಯಲ್ಲಿ ರಸ್ತೆ ಅಪಘಾತಕ್ಕೀಡಾಗುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡವರ ರಕ್ಷಣಾ ಕಾರ್ಯ ಮಾಡುತ್ತಿದ್ದ ವೇಳೆ ಮಗು ನೀರಿನಾಳಕ್ಕೆ ಬೀಳುತ್ತಿರೋದನ್ನ ಗಮನಿಸಿದ ವ್ಯಕ್ತಿಯೊಬ್ಬ ಹಿಂದೆ ಮುಂದೆ ಯೋಚಿಸದೇ ನೀರಿಗೆ ಹಾರಿದ್ದಾನೆ.

ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ…!

ಅಂದಹಾಗೆ ಮಗುವನ್ನ ರಕ್ಷಿಸಿದ ಈ ಪರೋಪಕಾರಿ ತಮ್ಮ ಹೆಸರನ್ನ ಬಹಿರಂಗಪಡಿಸೋದನ್ನ ನಿರಾಕರಿಸಿದ್ದಾರೆ. ಆದರೆ ಬ್ರಿಡ್ಜ್​​ನಲ್ಲಿ ನಡೆದ ಅಪಘಾತದಲ್ಲಿ ಈ ವ್ಯಕ್ತಿಯ ಕಾರೂ ಸಹ ಇತ್ತು ಎಂದು ತಿಳಿದುಬಂದಿದೆ.

ರಕ್ಷಣೆ ಮಾಡಿದ ಮಗುವನ್ನ ಜೋನ್ಸ್​ ಹಾಪ್ಕಿನ್ಸ್​ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅಪಘಾತದಲ್ಲಿ ಭಾಗಿಯಾದ ಇತರೆ 7 ಮಂದಿಯನ್ನ ಇದೇ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...