alex Certify ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನಿಗೆ ಧರಿಸಿದ್ದ ಪ್ಯಾಂಟನ್ನೇ ಕಳಚಿಕೊಟ್ಟ ಹೃದಯವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನಿಗೆ ಧರಿಸಿದ್ದ ಪ್ಯಾಂಟನ್ನೇ ಕಳಚಿಕೊಟ್ಟ ಹೃದಯವಂತ

ವಿಪರೀತ ಚಳಿಯಿಂದ ನರಳುತ್ತಿದ್ದ ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಸಹೃದಯಿಯೊಬ್ಬರು ತಾವು ಧರಿಸಿದ್ದ ಸ್ವೆಟ್ ಪ್ಯಾಂಟನ್ನೇ ಬಿಚ್ಚಿಕೊಟ್ಟ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

ಕ್ಯಾಲಿಫೋರ್ನಿಯಾದ ಡೋನಟ್ ಶಾಪ್‌ ಎದುರು ಹೋಗುತ್ತಿದ್ದ 26 ವರ್ಷದ ಡೇನಿಯಲ್ ಡಿಚರ್ಡ್ಸ್ ಹಾಗೂ ಆತನ ಪತ್ನಿ ಈ ನಿರ್ಗತಿಕ ವ್ಯಕ್ತಿಯನ್ನು ನೋಡಿದ್ದಾರೆ. ಡೇವಿಡ್ ಹೆಸರಿನ ಈ ವ್ಯಕ್ತಿಗೆ ದಂಪತಿ ಡೋನಟ್ ಶಾಪ್‌ನಲ್ಲಿ ತಿನ್ನಲು ಆಹಾರ ತೆಗೆದುಕೊಟ್ಟಿದ್ದಲ್ಲದೇ, ಕೊರೆಯುವ ಚಳಿಯಲ್ಲಿ ಕೇವಲ ಶಾರ್ಟ್ಸ್‌‌ನಲ್ಲಿ ನಿಂತಿದ್ದ ಆತನಿಗೆ ಸ್ವೆಟ್ ಪ್ಯಾಂಟ್ ಕೊಟ್ಟಿದ್ದಾರೆ.

ಕೆಲ ತಿಂಗಳ ಹಿಂದೆ ತನ್ನೆಲ್ಲಾ ಸ್ವತ್ತನ್ನೂ ಕಳೆದುಕೊಂಡಿದ್ದಾಗಿ ವಿವರಿಸಿದ ಡೇವಿಡ್, ತನ್ನತ್ತ ಈ ಹೃದಯಸ್ಪರ್ಶಿ ಭಾವ ತೋರಿದ ಡೇನಿಯಲ್‌ರನ್ನು ಅಪ್ಪಿ ಧನ್ಯವಾದ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...