alex Certify ಶಿಕ್ಷೆ ಪ್ರಕಟಿಸುವ ಮುನ್ನ ಕೋರ್ಟ್ ನಿಂದ ಪರಾರಿಯಾದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷೆ ಪ್ರಕಟಿಸುವ ಮುನ್ನ ಕೋರ್ಟ್ ನಿಂದ ಪರಾರಿಯಾದ ಭೂಪ

ಡ್ರಗ್ಸ್ ದಂಧೆ ಸ್ಯಾಂಡಲ್ ವುಡ್, ಕರ್ನಾಟಕ, ಭಾರತ ಮಾತ್ರವಲ್ಲದೆ, ಅಮೆರಿಕಾದಲ್ಲೂ ತಲೆನೋವಾಗಿ ಪರಿಣಮಿಸಿದೆ.

ಇದೇ ಪ್ರಕರಣದಲ್ಲಿ ಪೊಲೀಸರಿಂದ ಸೆರೆಯಾಗಿದ್ದ 34 ವರ್ಷದ ನಿಕೋಲಸ್ ಗ್ಯಾರಿಸನ್ ಎಂಬಾತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆಯೂ ನಡೆಯುತ್ತಿತ್ತು. ಇನ್ನೇನು ಆದೇಶ ಹೊರಬೀಳಬೇಕು ಎನ್ನುವಷ್ಟರಲ್ಲಿ ಆತ ಕೋರ್ಟ್ ಹಾಲ್ ನಿಂದಲೇ ಪರಾರಿಯಾಗಿದ್ದಾನೆ.

ಒಂದು ಕ್ಷಣ ಅಲ್ಲೇನಾಗುತ್ತಿದೆ ಎಂಬುದು ಪೊಲೀಸರಿಗೂ ಊಹಿಸಲಾಗಲಿಲ್ಲ. ಕೊನೆಗೂ ಆತನ ಬೆನ್ನತ್ತಿದ ಮೂವರು ಪೊಲೀಸರು ಅಟ್ಟಿಸಿಕೊಂಡು ಹೋದರು. ಮಹಡಿ ಮೆಟ್ಟಿಲು ಇಳಿಯುತ್ತಿದ್ದ ಗ್ಯಾರಿಸನ್ ಹಿಡಿಯಲು ಪೊಲೀಸ್ ಅಧಿಕಾರಿಯೊಬ್ಬರು ಸಿನಿಮಾ ಶೈಲಿಯಲ್ಲಿ ಜಂಪ್ ಮಾಡಿದರೂ ಆತ ತಪ್ಪಿಸಿಕೊಂಡು ಓಡುತ್ತಾನೆ. ಪೊಲೀಸ್ ಅಧಿಕಾರಿ ಮಾತ್ರ ಮೆಟ್ಟಿಲುಗಳಿಂದ ಉರುಳಿ ಬೀಳುತ್ತಾರೆ.

ಅಮೆರಿಕಾದ ಓಹಿಯೋ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು, ತಪ್ಪಿಸಿಕೊಂಡು ಓಡಿದ ಗ್ಯಾರಿಸನ್ ನನ್ನ ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾದರು. ಅಷ್ಟೇ ಅಲ್ಲದೆ, ಆತನಿಗೆ 6 ತಿಂಗಳ ಜೈಲು ಶಿಕ್ಷೆಯೂ ಆಗಿದೆ.

ನ್ಯಾಯಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಾವಳಿ ಸೆರೆಯಾಗಿದ್ದು, ನಗೆ ತರಿಸುವಂತಿದೆಯಾದರೂ ಪೊಲೀಸರ ಸಾಹಸ ಮೆಚ್ಚುವಂತಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...