alex Certify ಸೋಂಕು ಹರಡುವ ಅಪಾಯದ ಮಟ್ಟ ತೋರಿಸುತ್ತೆ ಈ ಉಪಕರಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕು ಹರಡುವ ಅಪಾಯದ ಮಟ್ಟ ತೋರಿಸುತ್ತೆ ಈ ಉಪಕರಣ..!

ಅಮೆರಿಕದ ವಾಷಿಂಗ್ಟನ್​​ನಲ್ಲಿ ನೀವು 10 ಜನರಿರುವ ಗುಂಪಿನಲ್ಲಿ ಇದ್ದೀರಿ ಅಂದರೆ ನೀವು ಸೋಂಕು ತಗಲುವ ಸಾಧ್ಯತೆ ಶೇಕಡಾ 18ರಷ್ಟಿರುತ್ತೆ. ಅದೇ ನೀವು ಪ್ಯಾರಿಸ್​ನಲ್ಲಿದೆ ಇದ್ದರೆ ಈ ಸಾಧ್ಯತೆ 32 ಪ್ರತಿಶತದಷ್ಟು ಅಂತಾ ವರದಿಗಳು ಹೇಳಿವೆ.‌

ಅಮೆರಿಕದ ವಿಜ್ಞಾನಿಗಳು ಇಂತಹದ್ದೊಂದು ಸಂಶೋಧನೆ ಮಾಡಿದ್ದು ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದರೆ ಉಂಟಾಗಬಲ್ಲ ಸಮಸ್ಯೆಗಳ ಬಗ್ಗೆ ವರದಿ ನೀಡಿದ್ದಾರೆ. ಜಾರ್ಜಿಯಾ ಇನ್ಸ್​​ಟಿಟ್ಯೂಟ್​ ಆಫ್​ ಟೆಕ್ನಾಲಜಿ ತಂಡ ಅಭಿವೃದ್ಧಿಪಡಿಸಿರುವ ಈ ಉಪಕರಣವು ಅಮೆರಿಕ ಹಾಗೂ ಯುರೋಪಿಯನ್​​ ದೇಶಗಳಲ್ಲಿ ಕೊರೊನಾ ಹರಡುವಿಕೆ ದರದ ಮಾಹಿತಿ ನೀಡಲಿದೆ.

ಈ ಉಪಕರಣ ಕೊರೊನಾ ಹರಡುವಿಕೆ ಪ್ರಮಾಣದ ಬಗ್ಗೆ ಮಾಹಿತಿ ನೀಡುತ್ತದೆಯಾದರೂ, ಯಾವ ರೀತಿಯ ಕಾರ್ಯಕ್ರಮ, ನೆರೆದ ಜನರಲ್ಲಿ ಎಷ್ಟು ಮಂದಿ ಮಾಸ್ಕ್​ ಧರಿಸಿದ್ದಾರೆ? ಸಾಮಾಜಿಕ ಅಂತರ ಕಾಪಾಡಿದ್ದಾರೆ ಈ ಎಲ್ಲ ಅಂಶಗಳ ಮೇಲೂ ಅನುಪಾತ ಬದಲಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...