alex Certify ಸೂಪರ್​ ಮಾರ್ಕೆಟ್​ನಲ್ಲಿ ಏಕಾಏಕಿ ಪ್ರತ್ಯಕ್ಷವಾಯ್ತು ದೈತ್ಯ ಹಲ್ಲಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್​ ಮಾರ್ಕೆಟ್​ನಲ್ಲಿ ಏಕಾಏಕಿ ಪ್ರತ್ಯಕ್ಷವಾಯ್ತು ದೈತ್ಯ ಹಲ್ಲಿ…..!

ದೈತ್ಯ ಹಲ್ಲಿಯೊಂದು ಸೂಪರ್​ ಮಾರ್ಕೆಟ್​​ನಲ್ಲಿ ಹರಿದಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಥೈಲ್ಯಾಂಡ್​​ನ ಸೂಪರ್​ ಮಾರ್ಕೆಟ್​ ಒಂದರಲ್ಲಿ ಈ ಘಟನೆ ನಡೆದಿದೆ.

ಥೈಲ್ಯಾಂಡ್​​​ನ 7 ಎಲೆವನ್​​ ಸ್ಟೋರ್​​ನಲ್ಲಿ ಈ ಎದೆ ಝಲ್​ ಎನ್ನಿಸುವ ದೃಶ್ಯವನ್ನ ಸೆರೆಹಿಡಿಯಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ. ವಿಡಿಯೋದಲ್ಲಿ ದೈತ್ಯ ಹಲ್ಲಿಯೊಂದು ಸೂಪರ್​ ಮಾರ್ಕೆಟ್​ನ ಕಪಾಟುಗಳ ಮೇಲೆ ಹರಿದಾಡಿದೆ. ನಾಲಿಗೆಯನ್ನ ಒಮ್ಮೆ ಹೊರಹಾಕುತ್ತಾ ಮತ್ತೊಮ್ಮೆ ಒಳಹಾಕುತ್ತಾ ದೈತ್ಯ ಹಲ್ಲಿ ಸೂಪರ್​ ಮಾರ್ಕೆಟ್​ ಸುತ್ತೆಲ್ಲ ಹರಿದಾಡಿದೆ.

ಟ್ವಿಟರ್​ನಲ್ಲಿ ಈ ವಿಡಿಯೋವನ್ನ ಮೊದಲು ಶೇರ್​ ಮಾಡಲಾಗಿದ್ದು ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿತ್ತು. ಆದರೆ ಬಳಿಕ ಟ್ವಿಟರ್​ನಲ್ಲಿ ಈ ವಿಡಿಯೋವನ್ನ ಡಿಲೀಟ್​ ಮಾಡಲಾಗಿದೆ. ಇದೀಗ ಫೇಸ್​ಬುಕ್​ ಹಾಗೂ ಯುಟ್ಯೂಬ್​​ನಲ್ಲಿ ಈ ವಿಡಿಯೋ ಸದ್ದು ಮಾಡ್ತಿದೆ.‌

ಫಾಲೋಅಪ್​ ಟ್ವೀಟ್​​ನಲ್ಲಿ ಮುಂಡೋ ನೋಮಡಾ ಬ್ಯಾಂಕಾಕ್​ ಹಾಗೂ ವಿವಿಧ ಭಾಗಗಳಲ್ಲಿ ಈ ರೀತಿ ದೈತ್ಯ ಹಲ್ಲಿಗಳು ಕಾಣಿಸಿಕೊಳ್ಳೋದು ಕಾಮನ್​ ಎಂದು ಹೇಳಿದ್ದಾರೆ. ಆದರೆ ಸೂಪರ್​ ಮಾರ್ಕೆಟ್​ನಂತಹ ಜನ ಸಂಪರ್ಕ ಇರುವ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಕೊಂಚ ವಿಚಿತ್ರ ಎನಿಸಿದೆ. ಬಹುಶಃ ಅದು ಮಾಂಸದ ವಾಸನೆ ಗ್ರಹಿಸಿ ಅಲ್ಲಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...