alex Certify ಕ್ಯಾಂಪಸ್‌ ನಲ್ಲಿ ತಬ್ಬಿಕೊಂಡ ಹುಡುಗ – ಹುಡುಗಿಗೆ‌ ಕಾಲೇಜಿನಿಂದ ʼಗೇಟ್‌ ಪಾಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಂಪಸ್‌ ನಲ್ಲಿ ತಬ್ಬಿಕೊಂಡ ಹುಡುಗ – ಹುಡುಗಿಗೆ‌ ಕಾಲೇಜಿನಿಂದ ʼಗೇಟ್‌ ಪಾಸ್ʼ

ಕಾಲೇಜು ಕ್ಯಾಂಪಸ್​​ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ವಿದ್ಯಾರ್ಥಿಗಳಿಬ್ಬರು ಬಹಿರಂಗವಾಗಿ ತಬ್ಬಿಕೊಂಡ ಕಾರಣ ಪಾಕಿಸ್ತಾನದ ವಿಶ್ವವಿದ್ಯಾಲಯ ಅವರನ್ನ ಉಚ್ಚಾಟಿಸಿದೆ. ಯುವತಿ ಯುವಕನಿಗೆ ಪ್ರೇಮ ನಿವೇದನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡಿತ್ತು.

ಲಾಹೋರ್​​ ವಿಶ್ವ ವಿದ್ಯಾಲಯದ ವಿಶೇಷ ಶಿಸ್ತು ಸಮಿತಿ ಮಾರ್ಚ್​ 12ರಂದು ಈ ವಿಚಾರವಾಗಿ ಸಭೆ ಕರೆದಿದ್ದರೂ ಸಹ ಇಬ್ಬರು ವಿದ್ಯಾರ್ಥಿಗಳು ಕಮಿಟಿ ಎದುರು ಹಾಜರಾಗುವಲ್ಲಿ ವಿಫಲರಾಗಿದ್ದಾರೆ.

ಕಮಿಟಿ ಎದುರು ಹಾಜರಾಗದ ಹಿನ್ನೆಲೆ ಹುಡುಗ ಹಾಗೂ ಹುಡುಗಿ ಇಬ್ಬರನ್ನೂ ಕ್ಯಾಂಪಸ್​ನಿಂದ ಹೊರಗಟ್ಟಲಾಗಿದೆ. ಇವರಿಬ್ಬರೂ ಮಾಡಿದ ಕೆಲಸ ವಿಶ್ವವಿದ್ಯಾಲಯದ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಲಾಹೋರ್​ ವಿಶ್ವ ವಿದ್ಯಾಲಯ ಹೇಳಿದೆ.

ಟ್ವಿಟರ್​ನಲ್ಲಿ ಈ ಪ್ರೇಮ ನಿವೇದನೆಯ ವಿಡಿಯೋ ಹಲ್​ಚಲ್​ ಸೃಷ್ಟಿಸಿತ್ತು. ವಿಡಿಯೋದಲ್ಲಿ ವಿದ್ಯಾರ್ಥಿನಿ ಎಲ್ಲರ ಎದುರು ಮೊಣಕಾಲೂರಿ ವಿದ್ಯಾರ್ಥಿ ಬಳಿ ಪ್ರೇಮ ನಿವೇದನೆ ಮಾಡುತ್ತಾಳೆ. ಆಕೆ ನೀಡಿದ ಹೂವನ್ನ ಸ್ವೀಕರಿಸಿದ ವಿದ್ಯಾರ್ಥಿ ಆಕೆಯನ್ನ ತಬ್ಬಿಕೊಳ್ತಾನೆ. ಅಲ್ಲೇ ಹತ್ತಿರದಲ್ಲಿದ್ದ ವಿದ್ಯಾರ್ಥಿಗಳು ಇವರಿಬ್ಬರಿಗೆ ಚಿಯರ್​ ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದರು.

ಲಾಹೋರ್​ ವಿಶ್ವವಿದ್ಯಾಲಯದ ಈ ಕ್ರಮ ಇಂಟರ್ನೆಟ್​ನಲ್ಲಿ ಮಿಶ್ರ ಪ್ರತಿಕ್ರಿಯೆಯನ್ನ ಪಡೆಯುತ್ತಿದೆ. ಅಮಿತಾಬ್​ ಬಚ್ಚನ್​ ‘ಮೊಹಬ್ಬತೆ’ ಸಿನಿಮಾಗೆ ಈ ಘಟನೆಯನ್ನ ಹೋಲಿಸಿ ವಿಶ್ವವಿದ್ಯಾಲಯದ ಕ್ರಮವನ್ನ ಬೆನ್​ಜಿರ್​ ಬುಟ್ಟೋ ಪುತ್ರಿ ಬಖ್ತವರ್​ ಬುಟ್ಟೋ ಜರ್ದಾರಿ ಟೀಕಿಸಿದ್ದಾರೆ.

ಇತ್ತ ಮಾಜಿ ಟೆಸ್ಟ್​ ಕ್ರಿಕೆಟಿಗ ವಾಸಿಂ ಅಕ್ರಂ ಪತ್ನಿ ಶನೇರಾ ಅಕ್ರಂ ಕೂಡ ಟ್ವೀಟ್​ ಮಾಡಿ, ನಿಮಗೆ ಯಾವುದು ಬೇಕೋ ಅದೆಲ್ಲ ನಿಯಮಗಳನ್ನ ವಿಧಿಸಿ ಆದರೆ ಪ್ರೀತಿಯನ್ನ ನಾಶ ಮಾಡೋಕೆ ನಿಮ್ಮಿಂದ ಸಾಧ್ಯವಿಲ್ಲ. ಅದು ನಮ್ಮ ಹೃದಯಲ್ಲಿದೆ. ವಿಶ್ವವಿದ್ಯಾಲಯ ಕಲಿಸದ ಎಷ್ಟೋ ಜೀವನದ ಪಾಠಗಳನ್ನ ಪ್ರೀತಿ ಕಲಿಸುತ್ತೆ ಎಂದು ಬರೆದುಕೊಂಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...