alex Certify ಆತಂಕಕ್ಕೆ ಕಾರಣವಾಗಿದೆ‌ ಡೆಲ್ವೇರ್ ರಾಜ್ಯದಷ್ಟು ವಿಸ್ತಾರವಿರುವ ಮಂಜುಗಡ್ಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತಂಕಕ್ಕೆ ಕಾರಣವಾಗಿದೆ‌ ಡೆಲ್ವೇರ್ ರಾಜ್ಯದಷ್ಟು ವಿಸ್ತಾರವಿರುವ ಮಂಜುಗಡ್ಡೆ

Giant Iceberg the Size of a US State Headed for British Island in Atlantic Ocean, Wildlife at Risk

ಅಮೆರಿಕ ಡೆಲ್ವೇರ್ ರಾಜ್ಯದಷ್ಟು ವಿಸ್ತಾರವಿರುವ ಬೃಹತ್‌ ಮಂಜುಗಡ್ಡೆಯೊಂದು ದಕ್ಷಿಣ ಜಾರ್ಜಿಯಾದ ಉಪ-ಅಂಟಾರ್ಕ್ಟಿಕ್‌ ದ್ವೀಪದ ಬಳಿ ತೇಲಿ ಬರುತ್ತಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯಿಂದ ವನ್ಯಸಂಪತ್ತಿಗೆ ಹಾನಿಯಾಗುವ ಭೀತಿ ಮೂಡಿದೆ.

ಈ ಬೃಹತ್‌ ಮಂಜುಗಡ್ಡೆ ದ್ವೀಪದ ಬಳಿ ಬಂದು ನಿಂತಲ್ಲಿ, ನೆಲದ ಮೇಲೆ ವಾಸ ಮಾಡಿಕೊಂಡು ಸಮುದ್ರಕ್ಕೆ ಹೋಗಿ ಆಹಾರ ಹುಡುಕಿ ಬರುವ ಜೀವಿಗಳಿಗೆ ಭಾರೀ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎಂದು ಬ್ರಿಟಿಷ್‌ ಅಂಟಾರ್ಕ್ಟಿಕ್ ಸರ್ವೇ ಆತಂಕ ವ್ಯಕ್ತಪಡಿಸಿದೆ.

ವರ್ಷದ ಈ ಅವಧಿಯಲ್ಲಿ ಪೆಂಗ್ವಿನ್‌ಗಳು ಹಾಗೂ ಸೀಲ್‌ಗಳು ಮರಿಗಳನ್ನು ಹಾಕಿ, ಅವುಗಳನ್ನು ಪೋಷಿಸುವ ಕಾಲವಾಗಿದ್ದು, ಆಹಾರ ಅರಸಿ ಸಾಕಷ್ಟು ದೂರ ಕ್ರಮಿಸಬೇಕಾಗುವ ಕಾರಣ ಈ ಮಂಜುಗಡ್ಡೆಯಿಂದ ಭಾರೀ ಅನಾಹುತಗಳಾಗುವ ಭೀತಿಯನ್ನು ಪರಿಸರ ತಜ್ಞ ಪ್ರೊಫೆಸರ್‌ ಗೆರಾಂಟ್‌ ಟಾರ್ಲಿಂಗ್ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...