alex Certify ಈ ಕಾರಣಕ್ಕೆ ಜನರ ಪಾಲಿಗೆ ಅಶುಭವಾಯ್ತಾ 2020…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಜನರ ಪಾಲಿಗೆ ಅಶುಭವಾಯ್ತಾ 2020…?

ಕೊರೊನಾ ವೈರಸ್​, ಆರ್ಥಿಕ ಸಂಕಷ್ಟ ಸೇರಿದಂತೆ ಹಲವಾರು ಕಾರಣಗಳಿಂದಾಗಿ 2020 ಬಹುಜನರ ಪಾಲಿಗೆ ಕೆಟ್ಟ ವರ್ಷವಾಗಿ ಪರಿಣಮಿಸಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ 13ನೇ ತಾರೀಖಿನಂದು ಶುಕ್ರವಾರ ಬಂದರೆ ಅದನ್ನ ಅಶುಭ ಎಂದು ನಂಬಲಾಗುತ್ತೆ. ಈ ವರ್ಷ ಈ ರೀತಿಯ ಅಶುಭ ದಿನ 2 ಬಾರಿ ಬಂದಿದೆ.

ಈ ವರ್ಷದ ಮಾರ್ಚ್ 13 ಹಾಗೂ ನವೆಂಬರ್​ 13ರಂದು ಶುಕ್ರವಾರ ಬಂದಿದೆ. ಹೀಗಾಗಿಯೇ ಈ ವರ್ಷ ಇಷ್ಟೊಂದು ಅಶುಭವಾಗಿದೆ ಅನ್ನುತ್ತೆ ಪಾಶ್ಚಾತ್ಯ ಸಂಸ್ಕೃತಿ.

ಇತಿಹಾಸಕಾರರು ಹೇಳುವ ಪ್ರಕಾರ 13ನೇ ತಾರೀಖಿನ ಶುಕ್ರವಾರದಂದು ದೇವರುಗಳೆಲ್ಲ ಕೂತು ಊಟ ಮಾಡುತ್ತಿದ್ದಾರೆ. ಕರೆಯದೇ ಬಂದ ಅತಿಥಿಯೊಬ್ಬ ಗುಂಡು ಹಾರಿಸಿ ಒಬ್ಬ ದೇವತೆಯನ್ನ ಬಲಿ ಪಡೆದ ಅಂತಾ ನಾರ್ಸ್​ ಪೌರಾಣಿಕ ಕತೆಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಭೂಮಿಯಲ್ಲಿ ಕತ್ತಲೆಯಾಯಿತು. ಹೀಗಾಗಿ ಈ ದಿನವನ್ನ ದುರಾದೃಷ್ಟದ ದಿನ ಎಂದು ಪರಿಗಣಿಸಲಾಗುತ್ತೆ.

ಶುಕ್ರವಾರದ 13ನೇ ತಾರೀಖಿನಂದು ಸಾಮಾನ್ಯವಾಗಿ ಜನರು ವಿಮಾನಗಳಲ್ಲಿ ಪ್ರಯಾಣ ಬೆಳೆಸೋದಿಲ್ಲ. ಅನೇಕರು 13ನೇ ಮಹಡಿಯಲ್ಲಿ ಮನೆಯನ್ನ ಕೊಳ್ಳೋಕೂ ಹಿಂಜರಿಯುತ್ತಾರೆ. ಈ ರೀತಿ ಅನೇಕ ಕಾರಣಗಳಿಂದ ಈ 13 ಎಂಬ ಸಂಖ್ಯೆಯೇ ಅಶುಭ ಎನ್ನಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...