alex Certify ಬಕೆಟ್‌ ನಲ್ಲಿ ಕೊಂಡೊಯ್ದಿದ್ದಾರೆ ಉಚಿತ ʼಬಿಯರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಕೆಟ್‌ ನಲ್ಲಿ ಕೊಂಡೊಯ್ದಿದ್ದಾರೆ ಉಚಿತ ʼಬಿಯರ್ʼ

ಮದ್ಯ ಪ್ರಿಯರಿಗೆ ಖುಷಿ ಸುದ್ದಿ ಇಲ್ಲಿ ಸಿಗುತ್ತದೆ. ಉಚಿತವಾಗಿ ಬಿಯರ್ ಸಂತರ್ಪಣೆ ನಡೆದಿದೆ. ಅಂದಹಾಗೆ ಇದು ಭಾರತದಲ್ಲಿ ಅಲ್ಲ…!

ಜರ್ಮನಿಯ ಬ್ರೆವರಿಯೊಂದು ಗುರುವಾರ 2600 ಲೀಟರ್ ಬಿಯರ್ ಅನ್ನು ಉಚಿತವಾಗಿ ಜನರಿಗೆ ಹಂಚಿತು. ತನ್ನ ದಾಸ್ತಾನು ಟ್ಯಾಂಕ್ ಖಾಲಿ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದ ಕಂಪೆನಿ ಅದನ್ನು ಜನರಿಗೆ ನೇರವಾಗಿ ಹಂಚಿತು.

ಲಾಕ್ ಡೌನ್ ಕಾರಣದಿಂದಾಗಿ ಹೋಟೆಲ್ – ರೆಸ್ಟೋರೆಂಟ್ ಗಳಿಗೆ ಬಿಯರ್ ತಲುಪಿಸಲು ಸಾಧ್ಯವಾಗಿರಲಿಲ್ಲ. ಹಾಗೆಯೇ ಅದನ್ನು ತನ್ನ ದಾಸ್ತಾನಿನಲ್ಲಿ ಇಟ್ಟುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಒಂದೋ ಚೆಲ್ಲ ಬೇಕಿತ್ತು. ಹೀಗಾಗಿ ಅದನ್ನು ಜನರಿಗೆ ನೀಡಿತು.

ಕೊರೊನಾ ಕಾರಣದಿಂದ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹಾಜರಾಗಿದ್ದ ಜನರು ಬಕೆಟ್ ಮತ್ತು ಬಾಕ್ಸ್ ಗಳಲ್ಲಿ ಮದ್ಯವನ್ನು ಮನೆಗೆ ಕೊಂಡೊಯ್ದರು. ಆರಂಭದಲ್ಲಿ 540 ಲೀಟರ್ ಬಿಯರ್ ನೀಡಲು ಕಂಪನಿ ಯೋಜಿಸಿತ್ತು, ಆದರೆ ಅದು ಕೆಲವೇ ಗಂಟೆಗಳಲ್ಲಿ ವಿತರಣೆಯಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...