alex Certify ದಂಡ ತಪ್ಪಿಸಿಕೊಳ್ಳಲು 30 ಕೆಜಿ ಕಿತ್ತಳೆ ಹಣ್ಣು ತಿಂದವರ ಗತಿ ಈಗ ಏನಾಗಿದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಡ ತಪ್ಪಿಸಿಕೊಳ್ಳಲು 30 ಕೆಜಿ ಕಿತ್ತಳೆ ಹಣ್ಣು ತಿಂದವರ ಗತಿ ಈಗ ಏನಾಗಿದೆ ಗೊತ್ತಾ…?

ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ತೂಕಕ್ಕೆ ದುಡ್ಡು ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹೋದ ನಾಲ್ವರು ಹುಚ್ಚು ಸಾಹಸವೊಂದಕ್ಕೆ ಕೈಹಾಕಿ ಅದಕ್ಕೀಗ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂದಿದೆ.

ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದ ಕುನ್‌ಮಿಂಗ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬ್ಯಾಗೇಜ್ ತೂಕವನ್ನು ಸರಿದೂಗಿಸಲೆಂದು ಈ ನಾಲ್ವರು ತಮ್ಮ ಬಳಿ ಇದ್ದ 30 ಕೆಜಿಯಷ್ಟು ಕಿತ್ತಳೆಯನ್ನು ಒಂದೇ ಏಟಿಗೆ ತಿಂದು ಬಿಟ್ಟಿದ್ದಾರೆ.

11 ತಿಂಗಳು…..50 ದೇಶ…..! ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡಿದ ಮುಂಬೈ ಪ್ರವಾಸಿಗ

ವಾಂಗ್ ಹೆಸರಿನ ಈ ವ್ಯಕ್ತಿ ತನ್ನ ಸಹೋದ್ಯೋಗಿಗಳ ಜೊತೆಗೆ 30 ಕೆಜಿ ಕಿತ್ತಳೆ ಹಣ್ಣುಗಳನ್ನು ಖರೀದಿ ಮಾಡಿದ್ದರು. ಈ ಹೆಚ್ಚುವರಿ ಕಿತ್ತಳೆ ಖರೀದಿಗೆ ತಮ್ಮ ಬಳಿ ವಿಮಾನಯಾನ ಸಂಸ್ಥೆಯು ಹೆಚ್ಚುವರಿ ದುಡ್ಡು ಕೇಳುತ್ತದೆ ಎಂಬ ಉಹೆ ಈ ನಾಲ್ವರಿಗೆ ಇರಲಿಲ್ಲ. ತಮ್ಮೂರಿಗೆ ವಿಮಾನದಲ್ಲಿ ಮರಳಿ ಹೋಗಲು 30 ಕೆಜಿ ಕಿತ್ತಳೆಯನ್ನು ವಿಮಾನದಲ್ಲಿ ಕೊಂಡೊಯ್ಯಲು 3384 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿ ಬಂದಿತ್ತು.

ಬಾಯಿ ಹುಣ್ಣು ತಕ್ಷಣ ವಾಸಿಯಾಗೋಕೆ ಇಲ್ಲಿದೆ ʼಮನೆ ಮದ್ದುʼ

ಈ ಹೆಚ್ಚುವರಿ ಪಾವತಿಯನ್ನು ತಪ್ಪಿಸಿಕೊಳ್ಳಲು ತಮ್ಮಲ್ಲಿದ್ದ ಅಷ್ಟೂ ಕಿತ್ತಳೆಯನ್ನು ಅರ್ಧ ತಾಸಿನಲ್ಲಿ ತಿಂದು ಮುಗಿಸಿದ್ದಾರೆ ಇವರು. ಈ ಮಟ್ಟದಲ್ಲಿ ಸಿಟ್ರಸ್ ಹಣ್ಣುಗಳನ್ನು ತಿಂದ ಪರಿಣಾಮ ಈಗ ಇವರೆಲ್ಲರ ಬಾಯಲ್ಲೂ ಅಲ್ಸರ್‌ಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...