alex Certify 11 ತಿಂಗಳು…..50 ದೇಶ…..! ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡಿದ ಮುಂಬೈ ಪ್ರವಾಸಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ತಿಂಗಳು…..50 ದೇಶ…..! ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡಿದ ಮುಂಬೈ ಪ್ರವಾಸಿಗ

ಪ್ರವೀಣ್​ ಮೆಹ್ತಾ ಎಂಬ ಹೆಸರಿನ ವ್ಯಕ್ತಿಯೊಬ್ಬರು ರಸ್ತೆ ಮಾರ್ಗವಾಗಿ ತಮ್ಮ ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬರೋಬ್ಬರಿ 11 ತಿಂಗಳ ಅವಧಿಯ ಪ್ರವಾಸದಲ್ಲಿ 70 ಸಾವಿರ ಕಿಲೋಮೀಟರ್​ ಕ್ರಮಿಸಿ 50 ದೇಶವನ್ನ ಸುತ್ತಿ ಬಂದಿದ್ದಾರೆ.

ತಮ್ಮ ಜರ್ನಿಯ ಅಮೂಲ್ಯ ಕ್ಷಣಗಳನ್ನ ಪ್ರವೀಣ್​​ ಡಾಕ್ಯೂಮೆಂಟರಿ ಮಾಡಿದ್ದು ಇದನ್ನ ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. 2019ರ ಏಪ್ರಿಲ್​ 8ನೇ ತಾರೀಖಿನಿಂದ ಮೆಹ್ತಾ ಜುಹು ಏರಿಯಾದಿಂದ ತಮ್ಮ ಪ್ರಯಾಣ ಆರಂಭಿಸಿದ್ದರು. ಭೂತಾನ್​ಗೆ ಬಂದ ಮೆಹ್ತಾಗೆ ಮಯನ್ಮಾರ್​ಗೆ ಪ್ರಯಾಣ ಬೆಳೆಸಲು ವೀಸಾ ಸಿಗಲಿಲ್ಲ. ಹೀಗಾಗಿ ವೀಸಾ ಮಾಡಿಸಬೇಕು ಅಂತಾ ಮೆಹ್ತಾ ಮನೆಗೆ ವಾಪಸ್ಸಾದ್ರು.

ಏಷಿಯಾದ ಬಹಳ ರಾಷ್ಟ್ರಗಳನ್ನ ಮೆಹ್ತಾ ಕಾರು ಪ್ರಯಾಣದ ಮೂಲಕವೇ ಕಂಡಿದ್ದಾರೆ. ಯುರೋಪ್​ನ 30 ದೇಶಗಳಿಗೆ ಮೆಹ್ತಾ ಭೇಟಿ ನೀಡಿದ್ದಾರೆ. ಇದು ಮಾತ್ರವಲ್ಲದೇ ಬ್ರಿಟನ್​ನ ಅನೇಕ ರಾಷ್ಟ್ರಗಳಿಗೂ ಮೆಹ್ತಾ ಭೇಟಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...