ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ತೂಕಕ್ಕೆ ದುಡ್ಡು ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹೋದ ನಾಲ್ವರು ಹುಚ್ಚು ಸಾಹಸವೊಂದಕ್ಕೆ ಕೈಹಾಕಿ ಅದಕ್ಕೀಗ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂದಿದೆ.
ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದ ಕುನ್‌ಮಿಂಗ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬ್ಯಾಗೇಜ್ ತೂಕವನ್ನು ಸರಿದೂಗಿಸಲೆಂದು ಈ ನಾಲ್ವರು ತಮ್ಮ ಬಳಿ ಇದ್ದ 30 ಕೆಜಿಯಷ್ಟು ಕಿತ್ತಳೆಯನ್ನು ಒಂದೇ ಏಟಿಗೆ ತಿಂದು ಬಿಟ್ಟಿದ್ದಾರೆ.
11 ತಿಂಗಳು…..50 ದೇಶ…..! ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡಿದ ಮುಂಬೈ ಪ್ರವಾಸಿಗ
ವಾಂಗ್ ಹೆಸರಿನ ಈ ವ್ಯಕ್ತಿ ತನ್ನ ಸಹೋದ್ಯೋಗಿಗಳ ಜೊತೆಗೆ 30 ಕೆಜಿ ಕಿತ್ತಳೆ ಹಣ್ಣುಗಳನ್ನು ಖರೀದಿ ಮಾಡಿದ್ದರು. ಈ ಹೆಚ್ಚುವರಿ ಕಿತ್ತಳೆ ಖರೀದಿಗೆ ತಮ್ಮ ಬಳಿ ವಿಮಾನಯಾನ ಸಂಸ್ಥೆಯು ಹೆಚ್ಚುವರಿ ದುಡ್ಡು ಕೇಳುತ್ತದೆ ಎಂಬ ಉಹೆ ಈ ನಾಲ್ವರಿಗೆ ಇರಲಿಲ್ಲ. ತಮ್ಮೂರಿಗೆ ವಿಮಾನದಲ್ಲಿ ಮರಳಿ ಹೋಗಲು 30 ಕೆಜಿ ಕಿತ್ತಳೆಯನ್ನು ವಿಮಾನದಲ್ಲಿ ಕೊಂಡೊಯ್ಯಲು 3384 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿ ಬಂದಿತ್ತು.
ಬಾಯಿ ಹುಣ್ಣು ತಕ್ಷಣ ವಾಸಿಯಾಗೋಕೆ ಇಲ್ಲಿದೆ ʼಮನೆ ಮದ್ದುʼ
ಈ ಹೆಚ್ಚುವರಿ ಪಾವತಿಯನ್ನು ತಪ್ಪಿಸಿಕೊಳ್ಳಲು ತಮ್ಮಲ್ಲಿದ್ದ ಅಷ್ಟೂ ಕಿತ್ತಳೆಯನ್ನು ಅರ್ಧ ತಾಸಿನಲ್ಲಿ ತಿಂದು ಮುಗಿಸಿದ್ದಾರೆ ಇವರು. ಈ ಮಟ್ಟದಲ್ಲಿ ಸಿಟ್ರಸ್ ಹಣ್ಣುಗಳನ್ನು ತಿಂದ ಪರಿಣಾಮ ಈಗ ಇವರೆಲ್ಲರ ಬಾಯಲ್ಲೂ ಅಲ್ಸರ್‌ಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ.