alex Certify ಐಷಾರಾಮಿ ಬೆಂಜ್​ ಕಾರುಗಳನ್ನ ಧ್ವಂಸ ಮಾಡಿದ ಮಾಜಿ ಉದ್ಯೋಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಬೆಂಜ್​ ಕಾರುಗಳನ್ನ ಧ್ವಂಸ ಮಾಡಿದ ಮಾಜಿ ಉದ್ಯೋಗಿ..!

ಅಸಮಾಧಾನಗೊಂಡಿದ್ದ ಮರ್ಸಿಡೀಸ್​ ಬೆಂಜ್​ನ ಮಾಜಿ ಸಿಬ್ಬಂದಿಯೊಬ್ಬ ಸ್ಪೇನ್​ನಲ್ಲಿರುವ ಬೆಂಜ್​ ಕಂಪನಿ ಮೇಲೆ ದಾಳಿ ನಡೆಸಲು ಯತ್ನಿಸಿದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. 38 ವರ್ಷದ ಮಾಜಿ ಉದ್ಯೋಗಿ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ 50 ಹೊಚ್ಚ ಹೊಸ ಕಾರುಗಳನ್ನ ನಾಶ ಮಾಡಿದ್ದಾನೆ. ಇದರಿಂದ ಕಂಪನಿಗೆ ಬರೋಬ್ಬರಿ 6 ಮಿಲಿಯನ್ ಡಾಲರ್​​ ಮೌಲ್ಯದ ಹಾನಿ ಉಂಟಾಗಿದೆ ಎನ್ನಲಾಗಿದೆ.

ಡಿಸೆಂಬರ್​ 3ರಂದು ಕಾರ್ಖಾನೆಗೆ ಕದ್ದ ಜೆಸಿಬಿ ಸಮೇತ ನುಗ್ಗಿದ ಆರೋಪಿ ಬಾಸ್ಕ್​ ರಾಜಧಾನಿ ವಿಟೋರಿಯಾದಲ್ಲಿನ ಕೈಗಾರಿಕಾ ಕಾರ್ಖಾನೆಯಲ್ಲಿದ್ದ ಹಲವಾರು ಐಷಾರಾಮಿ ವಾಹನಗಳನ್ನ ಹಾನಿಗೊಳಪಡಿಸಿದ್ದಾನೆ.

ಹಾನಿಗೊಳಗಾದ ಕಾರುಗಳಲ್ಲಿ ಉನ್ನತ ಮಟ್ಟದ ವಿ ಕ್ಲಾಸ್​ ಮಾದರಿಯ ವಾಹನಗಳೂ ಸೇರಿವೆ. ಇವೆಲ್ಲ ಸುಮಾರು 90000 ಪೌಂಡ್​ ಮೌಲ್ಯದ್ದಾಗಿವೆ. ಸೋಶಿಯಲ್​ ಮೀಡಿಯಾದಲ್ಲಿ ಹಾನಿಗೊಳಿಗಾದ ಕಾರುಗಳ ಫೋಟೋ ವೈರಲ್​ ಆಗ್ತಿದೆ. ದಾಳಿ ಎಷ್ಟು ತೀವ್ರವಾಗಿತ್ತೆಂದರೆ, ಪೊಲೀಸರಿಗಾಗಿ ಕಾಯುತ್ತಿರುವಾಗ ಶಂಕಿತನನ್ನು ತಡೆಯಲು ಭದ್ರತಾ ಸಿಬ್ಬಂದಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

— Dani Álvarez (@DaniAlvarezEiTB) December 31, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...