alex Certify ಮಹಿಳೆ ಕರೆಗೆ ಓಗೊಟ್ಟು ಓಡೋಡಿ ಬಂದು ಬೇಸ್ತು ಬಿದ್ದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಕರೆಗೆ ಓಗೊಟ್ಟು ಓಡೋಡಿ ಬಂದು ಬೇಸ್ತು ಬಿದ್ದ ಪೊಲೀಸರು

ಒಬ್ಬೊಂಟಿ ಮಹಿಳೆ, ಕಗ್ಗತ್ತಲ ರಾತ್ರಿ, ಕೋಣೆಯೊಳಗೆ ವಿಚಿತ್ರ ಸದ್ದು, ಯಾರೋ ಓಡಾಡಿದ ಭಾವ, ಎಚ್ಚರವಾದೊಡನೆ ಕಿಟಕಿ ಪರದೆ ಹತ್ತಿ ಓಡುವ ಯತ್ನ ನಡೆದಿತ್ತು.

ಗಾಬರಿಯಾದ ಮಹಿಳೆ ಸಹಾಯವಾಣಿಗೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ತಾಂಪ ಪೊಲೀಸರು, ಕೋಣೆಯೊಳಗೆ ನುಗ್ಗಿದ್ದ ಅತಿಥಿಯನ್ನು ಹೊರಗೋಡಿಸುವಲ್ಲಿ ಯಶಸ್ವಿಯಾದರು. ಫ್ಲೋರಿಡಾದಲ್ಲಿ ಈ ಘಟನೆ ನಡೆದಿದ್ದು, ಇಡೀ ಕಾರ್ಯಾಚರಣೆಯ ವಿಡಿಯೋವನ್ನು ಪೊಲೀಸರು ಟ್ವೀಟ್ ಮಾಡಿದ್ದಾರೆ.

ವಿಡಿಯೋ ವೀಕ್ಷಿಸಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದು, ಅನೇಕರು ಪೊಲೀಸರ ಕಾರ್ಯಾಚರಣೆ ಶ್ಲಾಘಿಸಿದ್ದಾರಲ್ಲದೆ, ಮಹಿಳೆಯನ್ನು ರಕ್ಷಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಅಸಲಿಗೆ ಮನೆಯೊಳಗೆ ನುಗ್ಗಿದ್ದು ರಕೂನ್ ಎಂಬ ನಿಶಾಚಾರಿ ಪ್ರಾಣಿ. ಒಳಗೆ ಬಂದ ಬಳಿಕ ಹೊರಹೋಗಲು ದಾರಿ ಕಾಣದೆ ಪರಿತಪಿಸುತ್ತಿತ್ತು. ಇದೇ ವೇಳೆಗೆ ಮಹಿಳೆಗೆ ಎಚ್ಚರವಾದ್ದರಿಂದ ಅದೂ ಗಾಬರಿಯಾಗಿದೆ. ಕೋಣೆಯ ಬಾಗಿಲು ಹಾಕಿ ಹೊರಬಂದ ಮಹಿಳೆ ಪೊಲೀಸರನ್ನು ಕರೆಸಿದ್ದಾರೆ.

ಬಾಗಿಲು ತೆರೆದು ನೋಡಿದಾಗ ರಕೂನ್ ಕಾಣಿಸಿಕೊಂಡಿದ್ದು, ಅದೂ ಗಾಬರಿಯಿಂದ ಮನೆಯಲ್ಲೆಲ್ಲಾ ಓಡಾಡಿದೆ. ಕೊನೆಗೂ ಅದನ್ನು ಮನೆಯಿಂದ ಹೊರಗೋಡಿಸಲಾಯಿತು.

Masked Intruder!!

Masked intruder!Not knowing who else to call, a homeowner dialed 911 after hearing noises in her closet. Turns out, it was a raccoon.After much effort, coordination and chasing the masked bandit around the home, the raccoon finally ran out. One officer was nipped in the hand, but is doing okay. #HereWhenYouNeedUs #SafetyFirst #CopsInTheCommunity

Posted by Tampa Police Department on Wednesday, September 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...