alex Certify ಪ್ರೀತಿಯ ನಾಯಿಗೆ ವಿಶೇಷ ರೀತಿಯ ಜನ್ಮ ದಿನಾಚರಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ನಾಯಿಗೆ ವಿಶೇಷ ರೀತಿಯ ಜನ್ಮ ದಿನಾಚರಣೆ..!

ಯಹೂದಿ ಧರ್ಮದಲ್ಲಿ ಆಚರಣೆ ಮಾಡುವ ಬಾರ್​ ಮಿಟ್ಜ್ವಾ ಎಂಬ ಆಚರಣೆ ಬಗ್ಗೆ ನೀವು ಕೇಳಿರಬಹುದು. ಬಾಲಕರಿಗೆ 13 ವರ್ಷ ವಯಸ್ಸಾಗುತ್ತಿದ್ದಂತೆಯೇ ಈ ಆಚರಣೆ ಮಾಡಲಾಗುತ್ತೆ. ಆದರೆ ವಿಚಿತ್ರ ಏನಂದ್ರೆ ಅಮೆರಿಕದ ಫ್ಲೋರಿಡಾದಲ್ಲಿ ನಾಯಿಯೊಂದಕ್ಕೆ ಈ ಆಚರಣೆ ಮಾಡಲಾಗಿದೆ.

13ನೇ ವಯಸ್ಸಿಗೆ ಕಾಲಿಟ್ಟ ನಾಯಿಗೆ ಕುಟುಂಬಸ್ಥರು ಬಾರ್​ ಮಿಟ್ಜ್ವಾ ಔತಣ ಕೂಟ ಆಯೋಜಿಸಿದ್ದಾರೆ. ಕುರ್ಚಿಯ ಮೇಲೆ ಕೂರಿಸಿದ ನಾಯಿಯ ತಲೆಗೆ ಶಾಲನ್ನ ಸುತ್ತಿ ಸಂಪ್ರದಾಯಬದ್ಧವಾಗಿ ಈ ಆಚರಣೆ ಮಾಡಲಾಗಿದೆ.

ಹುಟ್ಟುಹಬ್ಬದ ಉಡುಗೊರೆಯಾಗಿ ನೆರೆದಿದ್ದವರು ಆಟಿಕೆ ಸಾಮಗ್ರಿಗಳನ್ನ ಗಿಫ್ಟ್ ರೂಪದಲ್ಲಿ ನೀಡಿದ್ರು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ 2 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

ನಾಯಿಗಳಿಗೆ ಈ ರೀತಿ ಆಚರಣೆ ಮಾಡಿದ್ದು ಇದೇ ಮೊದಲೇನಲ್ಲ. ನಾಯಿಗಳ ಜೀವಿತಾವಧಿ 12 ರಿಂದ 13 ವರ್ಷವಾದ ಕಾರಣ ಶ್ವಾನಗಳಿಗೆ 13 ತಿಂಗಳು ತುಂಬುತ್ತಿದ್ದಂತೆಯೇ ಈ ಆಚರಣೆ ಮಾಡಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...