ಲಾಕ್ ಡೌನ್ ಘೋಷಿಸಿದ ವೇಳೆ ಇಬ್ಬರು ಫ್ಲಾಟ್ ಮೇಟ್ ಗಳು ಗಳು ಪಬ್ ಒಂದರಲ್ಲಿ ಸಿಲುಕಿಕೊಂಡರೂ, ಬಿಯರ್ ಸೇವಿಸುತ್ತ ಆನಂದದಿಂದ ಕಾಲ ಕಳೆದ ವಿಚಿತ್ರ ಪ್ರಘಟನೆ ನಡೆದಿದೆ.
ಡೊಮ್ ಟೌನ್ ಸೆಂಡ್ ಹಾಗೂ ಸ್ಟೀವ್ ಪಾಂಡ್ ಪಬ್ ನಲ್ಲಿ ಸಿಲುಕಿಕೊಂಡವರು. ಇವರಿಬ್ಬರು ಉತ್ತರ ಲಂಡನ್ ನ ಅಪಾರ್ಟ್ ಮೆಂಟ್ ಒಂದರ ಫ್ಲಾಟ್ ಮೇಟ್ ಗಳು.
ಕರೊನಾ ಕಾರಣದಿಂದ ಸ್ಟೋಕ್ ನ್ಯೂಂಗ್ಟನ್ ನಲ್ಲಿರುವ ಪಬ್ ಮುಚ್ಚಲಾಗಿದೆ. ಡೊಮ್ ಅದೇ ಪಬ್ ನ ಸಹಾಯಕ ಮ್ಯಾನೇಜರ್ ಕೂಡ ಆಗಿದ್ದಾರೆ.
ನಾವು ಸಿಲುಕಿಕೊಂಡಿದ್ದರ ಬಗ್ಗೆ ದೂರು ನೀಡುವ ಗೋಜಿಗೆ ಹೋಗಿಲ್ಲ, ಏಕೆಂದರೆ ನಮಗೆ ಫ್ರಶ್ ಬೀರ್ ಸಿಕ್ಕಿದೆ ಎಂದು ಅವರು ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರಿಬ್ಬರೂ ಪಬ್ ಒಳಗೆ ಆಟವಾಡುತ್ತಾ, ಆಹಾರ ತಯಾರಿಸಿಕೊಂಡು ದಿನ ಕಳೆಯುತ್ತಿದ್ದಾರಂತೆ.