alex Certify ಶಾಕಿಂಗ್: ಟಿವಿ ನೋಡುವುದರಲ್ಲಿ ಮಗ್ನನಾಗಿದ್ದ ಬಾಲಕ ಮಾಡಿದ್ದೇನು ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಟಿವಿ ನೋಡುವುದರಲ್ಲಿ ಮಗ್ನನಾಗಿದ್ದ ಬಾಲಕ ಮಾಡಿದ್ದೇನು ನೋಡಿ…!

ಚೀನಾದ ಬಾಲಕನೊಬ್ಬ ತನ್ನ ಪೋಷಕರು ಮನೆಯಿಂದ ಹೊರಗಿದ್ದ ವೇಳೆ ಟಿವಿ ನೋಡುತ್ತಾ ಬರೋಬ್ಬರಿ 123 ಮಾಗ್ನೆಟಿಕ್​ ಮಣಿಗಳನ್ನ ನುಂಗಿದ್ದಾನೆ. ಬಾಲಕನ ದೇಹದ ಒಳಗಿದ್ದ ಮಣಿಗಳನ್ನ ಕಂಡ ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ.

ತನ್ನ ಸಹೋದರಿಯ ಜೊತೆ ಟಿವಿ ನೋಡುತ್ತಿದ್ದ ಬಾಲಕ ಆಟಿಗೆ ಸಾಮಗ್ರಿಯಲ್ಲಿದ್ದ ಮಾಗ್ನೆಟಿಕ್​ ಮಣಿಗಳನ್ನ ನುಂಗಿದ್ದಾನೆ. ಮೊದಲು ಇದನ್ನ ಆತನ ಸಹೋದರಿ ಗಮನಿಸಿರಲಿಲ್ಲ. ಆದರೆ ಯಾವಾಗ ಬಾಲಕ ಉಸಿರಾಟದ ಸಮಸ್ಯೆಗೆ ಸಿಲುಕಿದನೋ ಆಗ ಸಹೋದರಿಗೆ ವಿಷಯ ತಿಳಿದಿದೆ.

ಮನೆಗೆ ಬಂದ ಪೋಷಕರಿಗೆ ಬಾಲಕ ಒಂದೇ ಮಣಿ ನುಂಗಿದ್ದಾನೆ ಅಂತಾ ಹೇಳಲಾಗಿತ್ತು. ಆದರೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದ ವೇಳೆ ಈ ಸತ್ಯ ಬೆಳಕಿಗೆ ಬಂದಿದೆ. ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿ ಮಣಿಗಳನ್ನ ಹೊರ ತೆಗೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...