alex Certify ಬಟ್ಟೆ ಕಾರಣಕ್ಕೆ ಜೈಲು ಸೇರಿದ ಹುಡುಗಿಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಕಾರಣಕ್ಕೆ ಜೈಲು ಸೇರಿದ ಹುಡುಗಿಯರು…!

ಈಜಿಪ್ಟ್ ನಲ್ಲಿ ಟಿಕ್‌ಟಾಕ್ ಮತ್ತು ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದ ಸ್ಟಾರ್ಸ್ ಮೇಲೆ ಕಾನೂನು ಕ್ರಮ ಮುಂದುವರೆದಿದೆ. ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈಜಿಪ್ಟ್ ನ್ಯಾಯಾಲಯವು 5 ಟಿಕ್ ಟಾಕ್ ಲಲನೆಯರಿಗೆ ಶಿಕ್ಷೆ ವಿಧಿಸಿದೆ. 5 ಸ್ಟಾರ್ಸ್ ಗೆ ತಲಾ 2 ವರ್ಷಗಳ ಜೈಲು ಶಿಕ್ಷೆಯಾಗಿದೆ.

ನ್ಯಾಯಾಲಯದ ಪ್ರಕಾರ, ಟಿಕ್ ಟಾಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಹುಡುಗಿಯರು ಹಂಚಿಕೊಂಡ ವಿಡಿಯೊಗಳು ಮತ್ತು ಚಿತ್ರಗಳು ಇಸ್ಲಾಂ ವಿರುದ್ಧವಾಗಿದೆ. ಕಡಿಮೆ ಬಟ್ಟೆ ಧರಿಸಿ ಯುವತಿಯರು ವಿಡಿಯೋ ಮಾಡಿದ್ದಾರೆ ಎಂಬ ಆರೋಪವಿದೆ.

ಈ ಹುಡುಗಿಯರಿಗೆ 19,000 ಯುಎಸ್ ಡಾಲರ್ ದಂಡ ವಿಧಿಸಲಾಗಿದೆ. ಸಾಮಾಜಿಕ ನಿಯಮ ಉಲ್ಲಂಘನೆ ಮಾಡದಂತೆ ಸಾಕಷ್ಟು ಎಚ್ಚರಿಕೆ ನೀಡಲಾಗಿತ್ತು. ಆದ್ರೆ ಹುಡುಗಿಯರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಈಜಿಪ್ಟ್ ನ ಕೆಲ ಜನರು ಹುಡುಗಿಯರ ಪರ ಹೋರಾಟ ಶುರು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...