ಸಿಡ್ನಿಯ ಮೀನುಗಾರರ ಗುಂಪೊಂದು ಬೋಟ್ನಲ್ಲಿ ಸಾಗುವ ವೇಳೆ ಬರೋಬ್ಬರಿ 395 ಕೆಜಿ ತೂಕದ ಟೈಗರ್ ಶಾರ್ಕ್ನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ.
ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರಬಿಂದುವಾಗಿ ಬದಲಾಗಿದ್ದು ಅನೇಕರು ಈ ಮೀನುಗಾರರ ಗುಂಪನ್ನ ಮೂರ್ಖರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ನೋಗೆ ಬರ್ತಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್: ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ
ಬೃಹತ್ ಗಾತ್ರದ ಮೀನನ್ನ ಬೋಟ್ನಲ್ಲಿ ಹಾಕಿಕೊಳ್ಳಲು ಮೀನುಗಾರರ ತಂಡ ಹೆಣಗಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮೀನು ಅದರ ಲೋಕದಲ್ಲಿ ಆರಾಮಾಗಿ ಈಜಾಡುತ್ತಿತ್ತು. ನಿಮ್ಮ ಮೋಜಿಗಾಗಿ ಈ ಕೃತ್ಯ ಎಸಗುವ ಅವಶ್ಯಕತೆ ಇತ್ತೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.