alex Certify ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ಕೋಟ್ಯಾಧಿಪತಿಯಾದ ಮೀನುಗಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ಕೋಟ್ಯಾಧಿಪತಿಯಾದ ಮೀನುಗಾರ…!

ನೀವು ರಾತ್ರಿ ಮಲಗಿದ ವೇಳೆ ಕೋಟ್ಯಾಧಿಪತಿಯಾದಂತೆ ಕನಸು ಕಾಣುತ್ತೀರಿ ಹಾಗೂ ಮಾರನೇ ದಿನವೇ ಈ ಕನಸು ನನಸಾಗಿ ಬಿಡುತ್ತೆ ಅನ್ನೋದನ್ನ ಊಹೆ ಮಾಡ್ಕೊಳ್ಳಿ. ಥೈಲ್ಯಾಂಡ್​ನ ಮೀನುಗಾರರೊಬ್ಬರ ಜೀವನದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದೆ.

ಈ ಮೀನುಗಾರನಿಗೆ ಎಂತಹ ಅಮೂಲ್ಯವಾದ ಮುತ್ತು ಸಿಕ್ಕಿದೆ ಅಂದರೆ ಇದರಿಂದ ಆತನ ಹಣೆಬರಹವೇ ಬದಲಾಗಿದೆ. ಈ ಮುತ್ತಿನ ಮೌಲ್ಯ ಸರಿ ಸುಮಾರು 2.5 ಕೋಟಿ ರೂಪಾಯಿಯಾಗಿದೆ. ಅಂದಹಾಗೆ ಹಟ್ಚಯ್​​ ನಿಯೋಮ್ಡೆಚಾ ರಾತ್ರಿ ಮಲಗಿದ್ದ ವೇಳೆ ಸಮುದ್ರದ ದಡದಲ್ಲಿ ಉಡುಗೊರೆಗಳು ಸಿಕ್ಕಂತೆ ಕನಸನ್ನ ಕಂಡಿದ್ದರು.

ಹಟ್ಚಯ್​ ಸಮುದ್ರದ ದಡದಲ್ಲಿ ಬೆಳಗ್ಗೆ ತಮ್ಮ ಕುಟುಂಬಸ್ಥರ ಜೊತೆ ಸೇರಿ ಕಪ್ಪೆಚಿಪ್ಪನ್ನ ಆಯುತ್ತಿದ್ದರು. ಈ ವೇಳೆ ಅವರ ಗಮನ ನೀರಿನಲ್ಲಿ ತೇಲುತ್ತಿದ್ದ ವಸ್ತುವೊಂದರ ಮೇಲೆ ಬಿದ್ದಿದೆ.

ಆ ವಸ್ತುವಿನ ಸುತ್ತ ಕಪ್ಪೆ ಚಿಪ್ಪು ಆವೃತವಾಗಿತ್ತು. ಈ ಕಪ್ಪೆಚಿಪ್ಪುಗಳನ್ನ ಹಿಡಿದ ಹಟ್ಚಯ್​ ತನ್ನ ಸಹೋದರನನ್ನು ಕರೆದುಕೊಂಡು ತಂದೆಯ ಬಳಿ ಹೋದ್ರು. ತಂದೆ ಈ ಚಿಪ್ಪನ್ನ ಸ್ವಚ್ಛಗೊಳಿಸಿದ ಬಳಿಕ ಅದರಲ್ಲಿ ಕೇಸರಿ ಬಣ್ಣದ ಬೆಲೆಬಾಳುವ ಮುತ್ತನ್ನ ಕಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...