alex Certify ಹರಾಜಿಗಿದೆ ಅಪರೂಪದ ಸೆಲ್ಫಿ ಫೋಟೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗಿದೆ ಅಪರೂಪದ ಸೆಲ್ಫಿ ಫೋಟೋ….!

ಅಮೆರಿಕದ ಹೆಸರಾಂತ ಗಗನಯಾತ್ರಿ ನೀಲ್​ ಆರ್ಮ್​ಸ್ಟ್ರಾಂಗ್​ ಚಂದ್ರನ ಅಂಗಳದಲ್ಲಿ ತೆಗೆದ ಸೆಲ್ಫಿ ಫೋಟೋವೊಂದು ಕ್ರೀಸ್ಟ್​​ನಲ್ಲಿ ಹರಾಜಿಗಿಡಲಾದ ಸಾವಿರಾರು ಫೋಟೋಗ್ರಫಿ ಸಾಲಿನಲ್ಲಿ ಇಡಲಾಗಿದೆ.

ಸುಮಾರು 2400ಕ್ಕೂ ಹೆಚ್ಚು ಬಾಹ್ಯಾಕಾಶದ ಫೋಟೋಗಳನ್ನ ಈ ಸಾಲಿನಲ್ಲಿ ಇಡಲಾಗಿದೆ. ಅಲ್ಲದೇ ಈ ಚಿತ್ರಗಳನ್ನ ನೋಡ್ತಾ ಇದ್ದರೆ ನಿಮಗೇನೆ ನಾನು ಚಂದ್ರನ ಮೈ ಮೇಲೆ ಇದ್ದೇನೆ ಅಂದು ಭಾಸವಾಗುತ್ತೆ ಅಂತಾ ಕ್ರಿಸ್ಟೀ ಹೇಳಿದೆ.

ಖಾಸಗಿ ಚಿತ್ರ ಸಂಗ್ರಾಹಕ ವಿಕ್ಟರ್​ ಮಾರ್ಟಿನ್​ ಮಾಲ್ಬುರೆಟ್​ ದಶಕಗಳಿಂದ ಸಂಗ್ರಹಿಸಿದ್ದ ವಾಯೇಜ್​ ಟು ಅನದರ್​​ ವಲ್ಡ್​ ಎಂಬ ಸಂಗ್ರಹದಲ್ಲಿ ಇಂತಹ ಅಪ್ರತಿಮ ಚಿತ್ರಗಳು ದೊರಕಿವೆ.

ನೀಲ್​ ಆರ್ಮಸ್ಟ್ರಾಂಗ್​​ ಚಂದ್ರನ ಮೈಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಕೀರ್ತಿಗೆ ಪಾತ್ರರಾಗಿದ್ದವರು. ತನ್ನ ಇಬ್ಬರು ಸಿಬ್ಬಂದಿಯಾದ ಆಲ್ಟ್ರಿನ್​ ಹಾಗೂ ಮೈಕ್​​ ಕಾಲಿನ್ಸ್ ಜೊತೆ ಚಂದ್ರನ ಅಂಗಳದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ ನೀಲ್​, ಇದು ಮನುಷ್ಯನ ಪಾಲಿಗೆ ಒಂದು ಚಿಕ್ಕ ಹೆಜ್ಜೆ ಆದರೆ ಮಾನವಕುಲಕ್ಕೆ ಇದೊಂದು ದೊಡ್ಡ ಹೆಜ್ಜೆ ಎಂದು ಹೇಳಿದ್ದರಂತೆ.

ಚಂದ್ರಯಾನದ ಬಳಿಕ ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಆರ್ಮ್​ಸ್ಟ್ರಾಂಗ್​ ಇರಲಿಲ್ಲ. ಅವರು ಚಂದ್ರನ ಫೋಟೋಗಳನ್ನ ತೆಗೆಯೋದರಲ್ಲೇ ಬ್ಯುಸಿಯಾಗಿದ್ದರಂತೆ. ಸದ್ಯ ನೀಲ್​​ ಆರ್ಮ್​ಸ್ಟ್ರಾಂಗ್​​ರ ಈ ಚಿತ್ರ 29,11,174.50 ರೂಪಾಯಿಗೆ ಮಾರಾಟವಾಗುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...