ಮನುಷ್ಯರೂಪಿ ರೊಬೋಟ್ ಸೋಫಿಯಾ ರಚಿಸಿರುವ ಡಿಜಿಟಲ್ ಆರ್ಟ್ ವರ್ಕ್ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 5,05,05,134.83 ರೂಪಾಯಿಗೆ ಮಾರಾಟವಾಗಿದೆ. ಎನ್ಎಫ್ಟಿ ರೂಪದಲ್ಲಿ ಆರ್ಟ್ವರ್ಕ್ ಖರೀದಿ ಮಾಡಲಾಗಿದೆ.
2016ರಲ್ಲಿ ರೂಪುಗೊಂಡ ರೋಬೋಟ್ ಸೋಫಿಯಾ ವರ್ಣರಂಜಿತ ಕಲಾಕೃತಿಗೆ ಫೇಮಸ್ ಆಗಿರುವ 31 ವರ್ಷದ ಇಟಾಲಿಯನ್ ಡಿಜಿಟಲ್ ಕಲಾವಿದೆ ಬೊನಾಸೆಟೋ ಅವರ ಸಹಯೋಗದಲ್ಲಿ ಈ ಕಲಾಕೃತಿಗಳನ್ನ ರಚಿಸಿದೆ. ಈ ಡಿಜಿಟಲ್ ಕಲಾಕೃತಿಯಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಸೇರಿದಂತೆ ಅನೇಕರು ಸೇರಿದ್ದಾರೆ.
ರೊಬೋಟ್ಗಳ ಹೊಸ ತಂತ್ರಜ್ಞಾನದ ಬಗ್ಗೆ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡ್ತಾರೆ ಅನ್ನೋದನ್ನ ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಬೆಳ್ಳಿ ಬಣ್ಣದ ಧಿರಿಸನ್ನ ಧರಿಸಿದ್ದ ರೊಬೋಟ್ ಸೋಫಿಯಾ ವರದಿಗಾರರಿಗೆ ಹೇಳಿದೆ.
ಈ ಡಿಜಿಟಲ್ ಕಲಾಕೃತಿಯನ್ನ ಕೊಂಡ ವ್ಯಕ್ತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.