ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಹೃದಯವಂತರ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಫ್ಲಾರಿಡಾದ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಮರಿಯನ್ನು ಮೊಸಳೆ ಬಾಯಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ವಿಡಿಯೋವೊಂದು ಸದ್ದು ಮಾಡಿತ್ತು. ವರ್ಷಾಂತ್ಯದ ವೇಳೆ ಮತ್ತೊಂದು ವಿಡಿಯೋ ಹೀಗೇ ಸುದ್ದಿಯಲ್ಲಿದೆ.
ಕಾನ್ಸಾಸ್‌ನ ಎಡ್ಗರ್‌ಟೌನ್‌ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೀತಲ ನೀರಿನೊಳಗೆ ಸಿಲುಕಿದ್ದ ಜಿಂಕೆಯೊಂದನ್ನು ರಕ್ಷಿಸಿದ್ದಾರೆ.
ಇಲ್ಲಿನ ಜಾನ್ಸನ್ ಕೌಂಟಿಯ ಶೆರೀಫ್ ಒಬ್ಬರು ಕರ್ತವ್ಯದ ವೇಳೆ ಹೆಪ್ಪುಗಟ್ಟಿದ್ದ ಕೊಳದೊಳಗೆ ಸಿಲುಕಿದ್ದ ಜಿಂಕೆಯೊಂದನ್ನು ಕಂಡ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತೀರದಿಂದ 50 ಅಡಿ ದೂರದಲ್ಲಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆಯನ್ನು ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಲು ಸಫಲರಾಗಿದ್ದಾರೆ. ಈ ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದೆ.
https://www.facebook.com/watch/?v=4151715218175913&t=0