alex Certify BREAKING NEWS: ಕೊನೆಗೂ ಕನ್ಫರ್ಮ್ – ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕೊನೆಗೂ ಕನ್ಫರ್ಮ್ – ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವು

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬದುಕಿದ್ದಾರೆಯೇ? ಇಲ್ಲವೇ? ಎನ್ನುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಚೀನಾ ತಜ್ಞ ವೈದ್ಯರ ತಂಡವನ್ನು ಉತ್ತರ ಕೊರಿಯಾಕ್ಕೆ ಕಳಿಸಲಾಗಿದೆ. ಈ ನಡುವೆ ಅಮೆರಿಕ ಕಿಮ್ ಜಾಂಗ್ ಉನ್ ಆರೋಗ್ಯ ಮತ್ತು ಸಾವಿನ ಅನುಮಾನದ ಕುರಿತಾಗಿ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ.

ಕಿಮ್ ಜಾಂಗ್-ಉನ್ ಮೃತಪಟ್ಟಿದ್ದರೂ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಕಿಮ್ ಜಾಂಗ್ ಉನ್ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯ ಗಂಭೀರ ಪರಿಸ್ಥಿತಿ ತಲುಪಿರುವುದರಿಂದ ಚೀನಾ ತಜ್ಞ ವೈದ್ಯರ ತಂಡವನ್ನು ಉತ್ತರ ಕೊರಿಯಾಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

ಈ ನಡುವೆ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ಕೆಲವು ಅಂತರ್ಜಾಲ ತಾಣಗಳು ವರದಿ ಮಾಡಿವೆ ಎಂದು ಇಂಟರ್ನ್ಯಾಷನಲ್ ಬಿಸಿನೆಸ್ ಟೈಮ್ ವರದಿ ತಿಳಿಸಿದೆ. ಹಾಂಕಾಂಗ್ ಸ್ಯಾಟಲೈಟ್ ಟಿವಿ, ಉತ್ತರ ಕೊರೊಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ವರದಿಯನ್ನು ಬಿತ್ತರಿಸಿದೆ.

ಆದರೆ ಉತ್ತರ ಕೊರಿಯಾದಿಂದ ಕಿಮ್ ಜಾಂಗ್-ಉನ್ ಸಾವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೂ ನೀಡಲಾಗಿಲ್ಲ. ಅನೇಕ ದೇಶಗಳು ಈ ಬಗ್ಗೆ ನಿಗಾ ವಹಿಸಿವೆ. ಉತ್ತರ ಕೊರಿಯಾದ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಬಗ್ಗೆ ನಿರ್ಧಾರ ಪ್ರಕಟಿಸುವ ಜೊತೆಗೆ ಕಿಮ್ ಜಾಂಗ್ ಉನ್ ಸಾವಿನ ಸುದ್ದಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...