ಮದುವೆ ಮನೆಗೆ ಬರುವ ಮದುಮಗ ಹಾಗೂ ಮಧುಮಗಳು ಕಾರಿನಲ್ಲಿ ಬರೋದು ಕಾಮನ್ , ಆದರೆ ಫಿಲಿಫೈನ್ಸ್ ರಾಷ್ಟ್ರದ ಮೆಬಿನೇ ಎಂಬಲ್ಲಿ ನವಜೋಡಿ ಪ್ರವಾಹದ ನೀರಿನಲ್ಲಿ ನಡೆದುಕೊಂಡು ಚರ್ಚ್ ತಲುಪಿದ್ದಾರೆ. ತಮ್ಮ ವಸ್ತ್ರಗಳನ್ನ ಹಿಡಿದುಕೊಂಡು ನದಿ ದಾಟ್ತಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಬಿನೇ ಎಂಬಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗ್ತಿದೆ. ಕ್ವಿಂಟಾ ಟೈಫೋನ್ನ ಹೊಡೆತದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಷ್ಟಾದ್ರೂ ಸಹ ಈ ಜೋಡಿ ತಮ್ಮ ಮದುವೆ ದಿನಾಂಕವನ್ನ ಮುಂದೂಡಿಲ್ಲ. ರಾನಿಲ್ ಗ್ವಿಲಿಪಾ ಹಾಗೂ ಜೆಸೀಲ್ ಮಸ್ವೇಲಾ ಮೊಣಕಾಲಿನವರೆಗೆ ತಮ್ಮ ಮದುವೆ ಡ್ರೆಸ್ಗಳನ್ನ ಎತ್ತಿಕ್ಕೊಂಡು ನದಿ ದಾಟಿದ್ದಾರೆ.
ನವಜೋಡಿಯ ಸಂಬಂಧಿಕರೂ ಕೂಡ ಪ್ರವಾಹವನ್ನ ಲೆಕ್ಕಿಸದೇ ಮದುವೆಗೆ ಹಾಜರಾಗಿದ್ದಾರೆ. ಮಧುಮಗಳ ಸಂಬಂಧಿಯೊಬ್ಬರು ಈ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.