alex Certify ಮಗನಿಗಾಗಿ ಈ ತಂದೆ ಮಾಡಿದ್ದಾರೆ ಎಂದೂ ಮಾಡದ ಕಾರ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗಾಗಿ ಈ ತಂದೆ ಮಾಡಿದ್ದಾರೆ ಎಂದೂ ಮಾಡದ ಕಾರ್ಯ…!

ತನ್ನ ಪುತ್ರನ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು ನಾರ್ಥಂಪ್ಟನ್‌ಶೈರ್‌ನ ವ್ಯಕ್ತಿಯೊಬ್ಬ ತನ್ನ ಜೀವಿತದಲ್ಲೇ ಎಂದೂ ಮಾಡದೇ ಇರುವ ಸಾಹಸವೊಂದನ್ನು ಮಾಡಲು ಮುಂದಾಗಿದ್ದಾರೆ.

ಎತ್ತರವೆಂದರೆ ಹೆದರುವ ಜೋಶ್ ಕಾಲಿನ್ಸ್‌ ಬರೀ ಕುರ್ಚಿ ಮೇಲೆ ನಿಂತುಕೊಳ್ಳಲೂ ಸಹ ಹೆದರುತ್ತಾರೆ. ಆದರೆ ಈಗ ತಮ್ಮ ಮಗನಿಗಾಗಿ, ಅವರು ವಿಮಾನವೊಂದರಿಂದ ಹೊರಗೆ ಹಾರಿ, ಸ್ಕೈ ಡೈವಿಂಗ್ ಮಾಡಿದ್ದಾರೆ. ಈ ವೇಳೆ ಅವರೊಂದಿಗೆ ವೃತ್ತಿಪರರೊಬ್ಬರು ಇದ್ದರು.

ತನ್ನ ಪುತ್ರ ಝಾಕ್ ಹಾಲೆಂಡ್‌ಗೆ ಗಾಲಿಕುರ್ಚಿ ಕೊಡಿಸಲೆಂದು, ಕಾಲಿನ್ಸ್‌ ಇದೇ ಸೆಪ್ಟೆಂಬರ್‌ 29ರಂದು ಸ್ಕೈ ಡೈವಿಂಗ್ ಮಾಡಿದ್ದಾರೆ. ಝಾಕ್‌ಗೆ ಡುಶಾನೆ ಮಸ್ಕ್ಯುಲರ್‌ ಡಿಸ್ಟ್ರೋಫಿ ಇದ್ದು, ಇಂಥ ಸಮಸ್ಯೆ ಇದ್ದವರು ಬಹಳ ದೂರ ನಡೆಯಲು ಸಾಧ್ಯವಾಗದೇ, ಅವರಿಗೆ ಗಾಲಿಕುರ್ಚಿಯ ಅಗತ್ಯವಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...