alex Certify ಮನೆ ಈಜುಕೊಳದಲ್ಲಿ ಜಗತ್ತಿನ ಅತ್ಯಂತ ವಿಷಪೂರಿತ ಹಾವು ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಈಜುಕೊಳದಲ್ಲಿ ಜಗತ್ತಿನ ಅತ್ಯಂತ ವಿಷಪೂರಿತ ಹಾವು ಪತ್ತೆ…!

ಆಸ್ಟ್ರೇಲಿಯಾದಲ್ಲಿ ದಂಪತಿ ವಾಸವಿದ್ದ ಮನೆಯ ಈಜುಕೊಳದಲ್ಲಿ ವಿಶ್ವದ ಅತ್ಯಂತ ಭಯಾನಕ ಹಾವೊಂದು ಪತ್ತೆಯಾಗಿದೆ. ಭಯಾನಕ ಈಸ್ಟರ್ನ್​ ಬ್ರೌನ್​ ಹಾವು ಅಡಿಲೇಡ್​ನ ಮರಿನೋದ ಈಜುಕೊಳದಲ್ಲಿ ಈಜಾಡಿದೆ.

ಅಡಿಲೇಡ್​ನ ಉರಗ ತಜ್ಞರ ಗುಂಪು, ಈಜುಕೊಳದಲ್ಲಿ ಈಜಾಡುತ್ತಿದ್ದ ಭಯಾನಕ ಹಾವಿನ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಮರಿನೋ ಉಷ್ಣಾಂಶದಲ್ಲಿ ಪಾರಾಗೋಕೆ ಈ ಕಂದು ಹಾವು ಉತ್ತಮ ಈಜುಕೊಳವನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಶೀರ್ಷಿಕೆ ನೀಡಲಾಗಿದೆ.

ಎಚ್ಚರಿಕೆಯಿಂದಿರಿ… ಈ ಹಾವುಗಳು ಬೇಸಿಗೆ ಕಾಲದಲ್ಲಿ ಎಲ್ಲಿ ಬೇಕಿದ್ದರೂ ಕಾಣಸಿಗಬಹುದು ಅಂತಾ ಕಮೆಂಟ್​ ಸೆಕ್ಷನ್​ನಲ್ಲಿ ವ್ಯಕ್ತಿಯೊಬ್ಬರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಅದ್ಭುತ ಈಜುಗಾರ ಎಂದು ಕಮೆಂಟ್​ ಮಾಡಿದ್ದಾರೆ.

ಈಸ್ಟರ್ನ್​ ಬ್ರೌನ್​ ಹಾವುಗಳು ಬ್ರೌನ್​ ಹಾವು ಎಂದೇ ಹೆಚ್ಚು ಪ್ರಚಲಿತವಾಗಿದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಈ ವಿಷಪೂರಿತ ಹಾವು ಕಾಣಸಿಗುತ್ತವೆ. ಆಸ್ಟ್ರೇಲಿಯಾದಲ್ಲಿ ಹಾವು ಕಚ್ಚಿದ್ದರಿಂದ ಉಂಟಾದ ಸಾವಿನಲ್ಲಿ ಈ ಹಾವಿನ ಪಾತ್ರವೇ ಹೆಚ್ಚಿದೆ ಎಂದು ಅಂಕಿ ಅಂಶ ಹೇಳಿದೆ.

This beautiful Eastern Brown found a nice place to cool down in the heat at Marino today. Too bad it was in the overflow channel of a family pool!

Posted by Snake Catchers Adelaide on Tuesday, January 12, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...