alex Certify ಬೆನಜೀರ್‌ ಭುಟ್ಟೋ ಪುತ್ರಿಯ ಆಮಂತ್ರಣ ಪತ್ರಿಕೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆನಜೀರ್‌ ಭುಟ್ಟೋ ಪುತ್ರಿಯ ಆಮಂತ್ರಣ ಪತ್ರಿಕೆ ವೈರಲ್

ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್​ ಭುಟ್ಟೋ ಹಾಗೂ ಮಾಜಿ ರಾಷ್ಟ್ರಪತಿ ಆಸಿಫ್​ ಅಲಿ ಜರ್ದಾರಿ ಪುತ್ರಿ ಭಖ್ತ್​ವಾರ್​ ಭುಟ್ಟೋ ಜರ್ದಾರಿ ಇದೇ ತಿಂಗಳ 27ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಅಮೆರಿಕ ಮೂಲದ ಉದ್ಯಮಿ ಮೊಹಮ್ಮದ್​​ ಚೌಧರಿ ಜೊತೆ ಮಾಜಿ ರಾಷ್ಟ್ರಪತಿ ಪುತ್ರಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಅಂತಾ ಮಾಹಿತಿ ಹೊರಬಿದ್ದಿದೆ. ಆದರೆ ಈ ಬಗ್ಗೆ ಭುಟ್ಟೋ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಮಂತ್ರಣ ಪತ್ರಿಕೆಯ ಅನುಸಾರ ಇದೇ ತಿಂಗಳ 27ರಂದು ಮದುವೆ ಹಾಗೂ ಜನವರಿ 30ರಂದು ವಿವಾಹ ನಡೆಯಲಿದೆ ಎನ್ನಲಾಗ್ತಿದೆ. ಅಲ್ಲದೇ ನಿಶ್ಚಿತಾರ್ಥ ಸಮಾರಂಭ ಬಿಲಾವಾಲ್​ ಹೌಸ್​ ಕರಾಚಿಯಲ್ಲಿ ನಡೆಯಲಿದೆ ಎನ್ನಲಾಗ್ತಿದೆ.

ಇನ್ನು ನಿಶ್ಚಿತಾರ್ಥಕ್ಕೆ ಆಗಮಿಸಲಿಚ್ಚಿಸುವ ಅತಿಥಿಗಳು ತಮ್ಮ ಕೊರೊನಾ ವೈರಸ್​ ನೆಗೆಟಿವ್​ ಪ್ರತಿಯನ್ನ ಇ ಮೇಲ್​ ಮಾಡುವಂತೆ ಆಮಂತ್ರಣ ಪತ್ರಿಕೆಯಲ್ಲಿ ಸೂಚನೆ ನೀಡಲಾಗಿದೆ. ಹಾಗೂ ಭದ್ರತಾ ದೃಷ್ಟಿಯಿಂದ ಮೊಬೈಲ್​ ಬಳಕೆಗೆ ನಿಷೇಧ ಹೇರಲಾಗಿದೆ.

ಮೊಹಮ್ಮದ್​ ಚೌಧರಿ ಅಮೆರಿಕ ಮೂಲದ ರಿಯಲ್​ ಎಸ್ಟೇಟ್​ ಉದ್ಯಮಿ ಯೂನಸ್​ ಚೌಧರಿ ಅವರ ಪುತ್ರ. ಪಾಕಿಸ್ತಾನದ ಹಳ್ಳಿಯೊಂದರಿಂದ ಕೆನಡಾಗೆ 1973ರಲ್ಲಿ ವಲಸೆ ಹೋಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...