alex Certify ವಿಶ್ವದ ಅತಿ ಶ್ರೀಮಂತ ಪಟ್ಟ ಅಲಂಕರಿಸಿದ ಎಲಾನ್​ ಮಸ್ಕ್​ ರಿಯಾಕ್ಷನ್​ ನೋಡಿ ನೆಟ್ಟಿಗರು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ಶ್ರೀಮಂತ ಪಟ್ಟ ಅಲಂಕರಿಸಿದ ಎಲಾನ್​ ಮಸ್ಕ್​ ರಿಯಾಕ್ಷನ್​ ನೋಡಿ ನೆಟ್ಟಿಗರು ಶಾಕ್​..!

ಎಲೋನ್ ಮಸ್ಕ್​​ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನ ಪಡೆದಿದ್ದಾರೆ. ಆದರೆ ಇಂತಹ ಖುಷಿಯ ವಿಚಾರಕ್ಕೂ ವಿಚಿತ್ರವಾಗಿ ಟ್ವೀಟ್​ ಮಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ ಎಲೋನ್ ಮಸ್ಕ್.

ಅಮೆಜಾನ್​ ಮುಖ್ಯಸ್ಥ ಜೆಫ್​ ಬೆಜೋಸ್​ರನ್ನ ಹಿಂದಿಕ್ಕಿದ ಟೆಸ್ಲಾ ಹಾಗೂ ಸ್ಪೇಸ್​ ಎಕ್ಸ್​ ಕಂಪನಿ ಸಿಇಒ ಎಲೋನ್​ ಮಸ್ಕ್​ ವಿಶ್ವದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಕಳಪೆ ಪ್ರದರ್ಶನದಿಂದಾಗಿ ಒಮ್ಮೆ ಟೆಸ್ಲಾ ಕಂಪನಿಯನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ದ ಮಸ್ಕ್​ ಇದೀಗ ಇದೇ ಕಂಪನಿಯ ನಾಗಾಲೋಟದಿಂದ ಈ ಸಾಧನೆ ಮಾಡಿದ್ದಾರೆ. ಗುರುವಾರ ಟೆಸ್ಲಾ ಷೇರು ಶೇಕಡಾ 4.8 ಮೇಲೆರಿದ್ದು ಈ ಮೂಲಕ ದಕ್ಷಿಣ ಆಫ್ರಿಕಾ ಮೂಲದ ಮಸ್ಕ್​ ಆಸ್ತಿ 188.5 ಬಿಲಿಯನ್​ ಡಾಲರ್​ ತಲುಪಿದೆ. ಈ ಆಸ್ತಿಯು ಅಮೆಜಾನ್​ ಮುಖ್ಯಸ್ಥ ಜೆಫ್​ ಬೆಜೋಸ್​ರ ಆಸ್ತಿಗಿಂತ 1.5 ಬಿಲಿಯನ್​ ಡಾಲರ್​ ಹೆಚ್ಚಿದೆ ಎಂದು ಹೇಳಲಾಗಿದೆ.

ಶ್ರೀಮಂತರ ಸಾಲಿನಲ್ಲಿ ಮೊದಲ ಸ್ಥಾನ ಪಡೆದಿರುವ ಮಸ್ಕ್​, ಎಷ್ಟು ವಿಚಿತ್ರ ಅಂತಾ ಆಶ್ಚರ್ಯಕರ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ ‘ಸರಿ, ಕೆಲಸಕ್ಕೆ ಹಿಂತಿರುಗುವಾ….!’ ಎಂದು ಬರೆದುಕೊಂಡಿದ್ದಾರೆ. ಇಂತಹ ದೊಡ್ಡ ಪಟ್ಟ ಅಲಂಕರಿಸಿದರೂ ಸಾಮಾನ್ಯರಂತೆ ವರ್ತಿಸಿದ ಮಸ್ಕ್​ರ ಟ್ವೀಟ್​ಗೆ ಸಾಕಷ್ಟು ರಿಟ್ವೀಟ್​ಗಳು ಹರಿದು ಬರ್ತಿವೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...