alex Certify ಮರಿಯನ್ನ ಎಬ್ಬಿಸೋಕೆ ತಾಯಿಯಾನೆ ಪಟ್ಟ ಕಷ್ಟ ಕಂಡು ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯನ್ನ ಎಬ್ಬಿಸೋಕೆ ತಾಯಿಯಾನೆ ಪಟ್ಟ ಕಷ್ಟ ಕಂಡು ನೆಟ್ಟಿಗರು ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ಪ್ರಾಣಿಯ ಮುದ್ದಾದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಈ ಹೊಸ ವಿಡಿಯೋಗಳ ಹಾವಳಿ ನಡುವೆಯೇ ಈ ಹಿಂದೆಯೇ ವೈರಲ್​ ಆಗಿದ್ದ ಆನೆ ಮರಿಯ ವಿಡಿಯೋವೊಂದು ಇದೀಗ ಮತ್ತೆ ಟ್ರೆಂಡಿಂಗ್​ನಲ್ಲಿದೆ. ಐಎಫ್​ಎಸ್​ ಅಧಿಕಾರಿ ರಮೇಶ್​ ಪಾಂಡೆ ಎಂಬವರು ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಭಾವುಕರನ್ನಾಗಿಸುತ್ತೆ ಮರಿಯಾನೆ ಮೇಲಿನ ತಾಯಿ ಪ್ರೀತಿ

ದಿನವಿಡೀ ಆಟವಾಡಿ ಮಜಾ ಮಾಡಿದ್ದ ಆನೆ ಮರಿಯೊಂದು ಮೃಗಾಲಯದಲ್ಲಿ ನಿದ್ದೆಗೆ ಜಾರಿತ್ತು. ಆನೆ ಮರಿಯ ತಾಯಿ ನಿದ್ದೆಯಿಂದ ಎಬ್ಬಿಸೋಕೆ ಎಷ್ಟೇ ಪ್ರಯತ್ನಪಟ್ಟರೂ ಮರಿ ಮಾತ್ರ ಏಳಲೇ ಇಲ್ಲ. ಇದರಿಂದ ಆತಂಕಕ್ಕೊಳಗಾದ ತಾಯಿ ಆನೆ ಸಹಾಯಕ್ಕಾಗಿ ಮೃಗಾಲಯದ ಸಿಬ್ಬಂದಿ ಬಳಿ ಹೋಗಿದೆ. ಕೂಡಲೇ ಬಂದ ಇಬ್ಬರು ಸಿಬ್ಬಂದಿ ಮರಿ ಆನೆಯನ್ನ ಎಬ್ಬಿಸಿದ್ದಾರೆ. ಎಚ್ಚರಗೊಂಡ ಮರಿ ಆನೆ ತಾಯಿ ಬಳಿ ಓಡಿ ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೇ ವೀವ್ಸ್ ಸಂಪಾದಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...