alex Certify ಬಾಟಲಿಯಲ್ಲಿ ಹಾಲು ಕುಡಿದ ಮರಿ ಆನೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಟಲಿಯಲ್ಲಿ ಹಾಲು ಕುಡಿದ ಮರಿ ಆನೆ; ವಿಡಿಯೋ ವೈರಲ್

ಆನೆಮರಿಯೊಂದು ಬಾಟಲಿಯಲ್ಲಿ ಹಾಲು ಕುಡಿಯುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನಮುಟ್ಟಿದೆ. ಎಲ್ಲರೂ ತುಂಬಾ ಕ್ಯೂಟ್ ಕ್ಯೂಟ್ ಎಂದು ಹಾಡಿ ಹೊಗಳುತ್ತಿದ್ದಾರೆ.

ಮಾಕ್ಟಾವ್ ಎಂಬ ಮರಿಯಾನೆ ಇದಾಗಿದ್ದು, ಶೆಲ್ಡ್ರಿಕ್ ವೈಲ್ಡ್ ಲೈಫ್ ನವರು ಇದರ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿ ಮಾವುತನೊಬ್ಬ ದೊಡ್ಡ ಹಾಲಿನ ಬಾಟಲಿಯನ್ನು ಇಟ್ಟುಕೊಂಡು ಅದರಿಂದ ಆನೆ ಮರಿಗೆ ಹಾಲು ಕುಡಿಸುತ್ತಾನೆ. ಇದರ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಲಾಗಿದೆ. ಇದು ಒಮ್ಮೆಗೆ ದೊಡ್ಡ ಗಾತ್ರದ ಬಾಟಲಿಯಲ್ಲಿ 2 ಬಾರಿ ಹಾಲು ಕುಡಿಯುತ್ತದೆ.

ಅನಾಥ ಆನೆ ಮರಿ ಇದಾಗಿದ್ದು, ಇದನ್ನು ರಕ್ಷಿಸಿ ಕರೆತರೆಲಾಗಿದೆ. ಇದು ಹೆಚ್ಚುವರಿ ಪೋಷಕಾಂಶಗಳನ್ನು ಹೊಂದಿರುವ ಹಾಲಾಗಿದೆ. ಶೆಲ್ಡ್ರಿಕ್ ವೈಲ್ಡ್ ಲೈಫ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, 39 ಸೆಕೆಂಡ್ ದೃಶ್ಯವಿದೆ. ಇದುವರೆಗೆ 12 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...