alex Certify ಪಾಕಿಸ್ತಾನದ ಮೀಟಿಂಗ್ ನಲ್ಲಿ ಹಿಂದೂ ದೇವರ ಹಾಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ಮೀಟಿಂಗ್ ನಲ್ಲಿ ಹಿಂದೂ ದೇವರ ಹಾಡು..!

ಪಾಕಿಸ್ತಾನದಿಂದ ಆಯೋಜನೆಗೊಂಡಿದ್ದ ಝೂಮ್ ಮೀಟಿಂಗ್​​ನ್ನು ಹ್ಯಾಕ್​ ಮಾಡಿದ ಅಪರಿಚಿತರು ಶ್ರೀರಾಮ ಹಾಗೂ ಆಂಜನೇಯ ದೇವರ ಭಕ್ತಿಗೀತೆಗಳನ್ನ ಪ್ಲೇ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಪ್ರಸಾರವಾಗ್ತಿದ್ದ ಆನ್​ಲೈನ್​ ಸಭೆಯಲ್ಲಿ ವಿವಿಧ ದೇಶಗಳ ತಜ್ಞರು ಭಾಗಿಯಾಗಿದ್ರು,

ಕಾಶ್ಮೀರವನ್ನ ಭಾರತ ಆಕ್ರಮಿಸಿಕೊಂಡು 72 ವರ್ಷ ಎಂಬ ವಿಚಾರವಾಗಿ ಪಾಕಿಸ್ತಾನ ಸಭೆ ಕರೆದಿತ್ತು. ಭಾರತ ವಿರೋಧಿ ಸಭೆ ಮುಂದುವರಿಯುತ್ತಿದ್ದಂತೆಯೇ ಶ್ರೀರಾಮ ಹಾಗೂ ಹನುಮಾನ್​ರ ಹಾಡುಗಳನ್ನ ನುಡಿಸುವ ಮೂಲಕ ಹ್ಯಾಕ್​ ಮಾಡಿದ್ದಾರೆ.

ಹಿಂದೂ ದೇವರ ಹಾಡುಗಳು ಕೇಳಲು ಆರಂಭವಾಗ್ತಿದ್ದಂತೆಯೇ ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಈ ಸಭೆಯಲ್ಲಿ ಈ ರೀತಿ ಏನಾದ್ರೂ ನಡೆಯುತ್ತೆ ಅಂತಾ ನಿರೀಕ್ಷಿಸಿದ್ವಿ ಅಂತಾ ಹೇಳೋದನ್ನ ಕೇಳಬಹುದಾಗಿದೆ. ವಿಡಿಯೋ ಹ್ಯಾಕ್​ ಮಾಡಿದ ಹ್ಯಾಕರ್​ಗಳು, ನಾವು ಭಾರತೀಯರು ನಿಮ್ಮನ್ನ ನಾವು ತುಳಿದು ಹಾಕ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...