alex Certify ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಡುತ್ತಿದ್ದ ಯುವತಿಯರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಡುತ್ತಿದ್ದ ಯುವತಿಯರು ಅರೆಸ್ಟ್

ಹಾಡಹಗಲಲ್ಲೇ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಬೆತ್ತಲೆಯಾಗುತ್ತಾ ಪೋಸ್ ಕೊಡುತ್ತಿದ್ದ ಯುವತಿಯರ ಗುಂಪೊಂದನ್ನು ದುಬೈ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿಡಿಯೋವನ್ನು ಪಕ್ಕದ ಕಟ್ಟಡವೊಂದರಿಂದ ಸೆರೆ ಹಿಡಿಯಲಾಗಿದ್ದು, ದುಬೈ ಮರೀನಾದಲ್ಲಿರುವ ಪೆಂಟ್‌ಹೌಸ್ ಅಪಾರ್ಟ್‌‌ಮೆಂಟ್‌ನಲ್ಲಿ ಯುವತಿಯರ ಈ ಗುಂಪು ಬೆತ್ತಲಾಗಿ ಪೋಸ್ ಕೊಡುತ್ತಿರುವುದನ್ನು ಪಕ್ಕದ ಕಟ್ಟಡದಿಂದ ವಿಡಿಯೋ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕವಾಗಿ ಅಸಭ್ಯತೆ ಮೆರೆದ ಕಾರಣ ಈ ಎಲ್ಲರನ್ನು ಬಂಧಿಸಲಾಗಿದೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಪ್ರಚಾರದ ಗೀಳಿಗಾಗಿ ಈ ಯುವತಿಯರು ಬೆತ್ತಲಾಗಿದ್ದಾರೆ ಎಂದು ವರದಿಯಾಗಿದೆ.

ಕಾಮದ ಮದದಲ್ಲಿ ಅಸಹ್ಯ ವರ್ತನೆ: ಆಟೋ, ಆಸ್ಪತ್ರೆಯಲ್ಲಿ ಎಲ್ಲರೆದುರಲ್ಲೇ ಹಸ್ತಮೈಥುನ

ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಸಂಬಂಧ ದುಬೈ‌ನಲ್ಲಿ ಬಹಳ ಕಠಿಣವಾದ ಕಾನೂನುಗಳಿದ್ದು, ಅಸಭ್ಯವಾಗಿ ಕಂಡುಬರುವ ಪೋಸ್ಟ್‌ಗಳನ್ನು ಹಾಕುವ ಮಂದಿ ದಂಡ ಹಾಗೂ ಕಸ್ಟಡಿಯಲ್ಲಿ ಒಂದಷ್ಟು ದಿನ ಕಳೆಯುವ ಶಿಕ್ಷೆ ವಿಧಿಸಲಾಗುತ್ತದೆ. ಅಸಭ್ಯ ಚಿತ್ರ ಹಾಗೂ ವಿಡಿಯೋ ಶೇರಿಂಗ್ ಮಾಡುವ ಮಂದಿಗೂ ಇದು ಅನ್ವಯವಾಗುತ್ತದೆ.

ಈ ಯುವತಿಯರು ಮಾಡಿದಂಥ ಕೃತ್ಯಗಳಿಗೆ ಜೈಲು ಶಿಕ್ಷೆಯೊಂದಿಗೆ 250,000 – 500,000 ದಿರ್ಹಮ್‌ಗಳವರೆಗೂ ದಂಡ ವಿಧಿಸುವ ಸಾಧ್ಯತೆಯನ್ನು ಅಲ್ಲಿನ ಕಾನೂನು ಕೊಡಮಾಡುತ್ತದೆ. ಸದ್ಯಕ್ಕೆ ಬಂಧಿತರಾದ ಯುವತಿಯರನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...