alex Certify ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದಂಗಾಗಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದಂಗಾಗಿಸುವ ದೃಶ್ಯ

ಎರಡು ದೈತ್ಯ ಶಾರ್ಕ್‌ಗಳು ಹಾಗೂ ಸ್ಟಿಂಗ್‌ರೇಗಳು ಬಳಿಯಲ್ಲೇ ಅಡ್ಡಾಡುತ್ತಿರುವಾಗಲೂ ಸಹ ಹಲವರು ಅಲ್ಲೇ ಈಜಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

Drone Shark App ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, ಸಾಲೋಮನ್ ಮೀನುಗಳ ದೊಡ್ಡ ಗುಚ್ಛವೊಂದರ ಬಳಿ ಇವರುಗಳು ಈಜಾಡುತ್ತಿದ್ದು ಇಲ್ಲಿ ಕೆಲವು ಡಾಲ್ಫಿನ್‌ಗಳು ಹಾಗೂ ಸೀಲ್‌ಗಳು ಇರುವುದನ್ನು ಸಹ ನೋಡಬಹುದಾಗಿದೆ. ಆದರೆ ಅಲ್ಲಿ ಶಾರ್ಕ್‌ಗಳೂ ಸಹ ಕಂಡುಬಂದಿರುವುದು ತಜ್ಞರ ಗಮನಕ್ಕೆ ಬಂದಿದೆ.

ಸಾಲೋಮನ್ ಮೀನುಗಳ ಗುಚ್ಛದ ಮೇಲೆ ಶಾರ್ಕ್‌ಗಳ ಕಣ್ಣುಗಳು ಯಾವಾಗಲೂ ಇರುವ ಕಾರಣ ಇಂಥ ಪ್ರದೇಶಗಳಲ್ಲಿ ಈಜಲು ಹೋಗಬಾರದು ಎಂದು ಈ ಡ್ರೋನ್ ಶಾರ್ಕ್ ಕಿರು ತಂತ್ರಾಂಶದ ಸಾಮಾಜಿಕ ಜಾಲತಾಣದ ಪೇಜ್‌ ವಾರ್ನ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...