alex Certify ರಸ್ತೆ ತುಂಬಾ ಹರಡಿತ್ತು ಸಾವಿರಾರು ‘ಮಾಸ್ಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ತುಂಬಾ ಹರಡಿತ್ತು ಸಾವಿರಾರು ‘ಮಾಸ್ಕ್’

ಕ್ಯಾಲಿಫೋರ್ನಿಯಾ: ಮಾಸ್ಕ್ ಈಗ ಅಮೂಲ್ಯ ವಸ್ತು. ಕರೋನಾ ವೈರಸ್ ಕಾರಣ ಸರ್ಕಾರಗಳು ಜನ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿವೆ.

ಕ್ಯಾಲಿಫೋರ್ನಿಯಾದ ಅಂತಾರಾಜ್ಯ ದಕ್ಷಿಣಾಭಿಮುಖ ಹೆದ್ದಾರಿ -880 ರಲ್ಲಿ ಸಾವಿರಾರು ನೀಲಿ ವೈದ್ಯಕೀಯ ಮಾಸ್ಕ್ ಗಳ ರಾಶಿ‌ ಬಿದ್ದುಕೊಂಡಿತ್ತು. ಚಾಲಕರು ವಾಹನ ನಿಲ್ಲಿಸಿ ಮಾಸ್ಕ್ ಗಳನ್ನು ಹೆಕ್ಕಿಕೊಂಡು ಹೋದರು.

ಅದರ ಫೋಟೋಗಳನ್ನು ಹೈವೆ ಪೆಟ್ರೋಲ್ ಸಿಬ್ಬಂದಿ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್ ಗಳು ಬಂದಿವೆ.

“ಮಾಸ್ಕ್ ಕೊಂಡೊಯ್ಯುವ ಲಾರಿಯಿಂದ ಗೊತ್ತಾಗದೇ ಕೆಲವು ಪೆಟ್ಟಿಗೆಗಳು ಬಿದ್ದಿರಬಹುದು” ಎಂದು ಕೆಟಿವಿಯು ನ್ಯೂಸ್ ವರದಿ ಮಾಡಿದೆ. “ಯಾವುದೋ ಚಾಲಕ ಉದ್ದೇಶಪೂರ್ವಕವಾಗಿ ಮಾಸ್ಕ್ ಬಾಕ್ಸ್ ಎಸೆದು ಹೋಗಿದ್ದಾನೆ” ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಆದರೆ, ಮಾಸ್ಕ್ ಹರಡಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ.

https://www.facebook.com/CHPHayward/posts/1630360393781173

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...