alex Certify ಮಾಲೀಕನಿಗೆ ಬಿಗ್ ಶಾಕ್: ಶೋರೂಮ್ ನಿಂದ ಖರೀದಿಸಿದ 20 ನಿಮಿಷದಲ್ಲೇ ನಜ್ಜುಗುಜ್ಜಾಯ್ತು 2 ಕೋಟಿಯ ಐಷಾರಾಮಿ ಕಾರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನಿಗೆ ಬಿಗ್ ಶಾಕ್: ಶೋರೂಮ್ ನಿಂದ ಖರೀದಿಸಿದ 20 ನಿಮಿಷದಲ್ಲೇ ನಜ್ಜುಗುಜ್ಜಾಯ್ತು 2 ಕೋಟಿಯ ಐಷಾರಾಮಿ ಕಾರ್..!

Unlucky driver crashes new £200,000 Lamborghini 20 MINUTES after ...

ಶೋರೂಮ್ ನಿಂದ ಪಡೆದುಕೊಂಡ 20 ನಿಮಿಷದಲ್ಲೇ ಅಪಘಾತ ಸಂಭವಿಸಿ ಕಣ್ಣೆದುರಲ್ಲಿಯೇ ಲ್ಯಾಂಬೋರ್ಗಿನಿ ಕಾರ್ ನಜ್ಜು ಗುಜ್ಜಾಗಿದೆ.

ಬ್ರಿಟನ್ ವೇಕ್ ಫೀಲ್ಡ್ ನಲ್ಲಿ ಘಟನೆ ನಡೆದಿದೆ. ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರ್ ಖರೀದಿಸಿದ ವ್ಯಕ್ತಿ ಶೋರೂಮ್ ನಿಂದ ಕಾರ್ ಪಡೆದ 20 ನಿಮಿಷದಲ್ಲಿ ಅಪಘಾತ ಸಂಭವಿಸಿದೆ. ಆತನ ಕಣ್ಣೆದುರಲ್ಲೇ ಐಷಾರಾಮಿ ಕಾರು ಹಾಳಾಗಿದೆ.

ಗ್ರೇ ಕಲರ್ ಲ್ಯಾಂಬೋರ್ಗಿನಿ ಹರಿಕೇನ್ ಸ್ಪೈಡರ್ ಮಾಡೆಲ್ ಕಾರ್ ನ್ನು 2ಕೋಟಿ ಕೊಟ್ಟು ಖರೀದಿಸಿದ ವ್ಯಕ್ತಿ ಕೆಲವೇ ನಿಮಿಷದ ಕಣ್ಣೆದುರಲ್ಲೇ ನಡೆದ ಘಟನೆಯಿಂದ ಕಂಗಾಲಾಗಿದ್ದಾನೆ.

ಕಾರು ಖರೀದಿಸಿದ ಕೆಲವೇ ನಿಮಿಷದಲ್ಲಿ ವಾಹನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ರಸ್ತೆಬದಿಗೆ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸುವಾಗ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಬೇರೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಲ್ಯಾಂಬೋರ್ಗಿನಿ ಕಾರಿನ ಹಿಂಬದಿ ಭಾಗ ಸಂಪೂರ್ಣ ಹಾಳಾಗಿದೆ. ಇದೊಂದು ದುರದೃಷ್ಟಕರ ಘಟನೆ ಎಂದು ಜಾಲತಾಣದಲ್ಲಿ ಚರ್ಚೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...