alex Certify ಈ ಕಾರಣಕ್ಕೆ ಚೀನಾ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ ಡೊನಾಲ್ಡ್ ಟ್ರಂಪ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಚೀನಾ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ ಡೊನಾಲ್ಡ್ ಟ್ರಂಪ್​..!

ಅಮೆರಿಕ ಅಧ್ಯಕ್ಷ ಸ್ಥಾನವನ್ನ ಜೋ ಬಿಡೆನ್​ಗೆ ವಹಿಸಿದ ಬಳಿಕ ಡೊನಾಲ್ಡ್​ ಟ್ರಂಪ್​ ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿಲ್ಲ. ಆದರೆ ಇದು ಡೊನಾಲ್ಡ್​ ಟ್ರಂಪ್​​ರ ಪ್ರತಿಮೆಗಳನ್ನ ತಯಾರಿಸಿರುವ ಚೀನಾದ ಉದ್ಯಮಿಯ ವ್ಯಾಪಾರದ ಮೇಲೆ ಯಾವುದೇ ಪರಿಣಾಮವನ್ನ ಬೀರಿಲ್ಲ.

ಈ ಪ್ರತಿಮೆಯು ದೂರದಿಂದ ನೋಡಿದ್ರೆ ಥೇಟ್​ ಡೊನಾಲ್ಡ್​ ಟ್ರಂಪ್​​ರಂತೆಯೇ ಕಾಣುತ್ತದೆಯಾದರೂ ಕುಳಿತಿರುವ ಭಂಗಿಯೆಲ್ಲ ಬುದ್ಧನ ರೀತಿಯಲ್ಲಿ ಇದೆ. ಶ್ವೇತ ವರ್ಣದ ಟ್ರಂಪ್​ – ಬುದ್ಧ ಪ್ರತಿಮೆಯಲ್ಲಿ ಬುದ್ಧ ಕುಳಿತಿರುವ ಭಂಗಿಯಲ್ಲೇ ಟ್ರಂಪ್​ ಆಸೀನರಾದಂತೆ ಭಾಸವಾಗುತ್ತೆ. ಈ ಪ್ರತಿಮೆಯು ಚೀನಾದ ಇ ಕಾಮರ್ಸ್ ಸೈಟ್​ Taobaoದಲ್ಲಿ ಪಟ್ಟಿ ಮಾಡಲಾಗಿದೆ. 4.6 ಮೀಟರ್​​ನ ದೊಡ್ಡ ಪ್ರತಿಮೆ ಬೆಲೆ 44,707 ರೂಪಾಯಿ ಹಾಗೂ 1.6 ಮೀಟರ್​ ಚಿಕ್ಕ ಪ್ರತಿಮೆಯ ಬೆಲೆ 11,168 ರೂಪಾಯಿ ಆಗಿದೆ.

ನೋಡುಗರನ್ನು ಬೆರಗಾಗಿಸುತ್ತೆ ಚಿನ್ನದ ಬಣ್ಣದ ʼಜೀರುಂಡೆʼ

ಶಿಯೋಮಿ ಮೂಲದ ಮಾರಾಟಗಾರ ಈ ಪರಿಕಲ್ಪನೆಯನ್ನ ಟ್ರಂಪ್​ರ ಅಪ್ರತಿಮ ‘ಮೇಕ್​ ಅಮೆರಿಕ ಗ್ರೇಟ್​ ಅಗೇನ್​’ ಎಂಬ ಘೋಷಣೆಯಿಂದ ಸ್ಪೂರ್ತಿ ಪಡೆದು ಮೇಕ್​ ಯುವರ್​ ಕಂಪನಿ ಗ್ರೇಟ್​ ಅಗೇನ್​ (ನಿಮ್ಮ ಕಂಪನಿಯನ್ನ ಮತ್ತೊಮ್ಮೆ ಅದ್ಭುತಗೊಳಿಸಿ) ಎಂಬ ಘೋಷಣೆಯೊಂದಿಗೆ ಈ ಪ್ರತಿಮೆಗಳನ್ನ ಮಾರಾಟ ಮಾಡ್ತಿದ್ದಾರೆ.

ಟ್ರಂಪ್​ ಕಳೆದ ವರ್ಷದವರೆಗೂ ವಿಶ್ವದ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾಗಿದ್ದರು. ಆದರೆ ಈಗ ಟ್ರಂಪ್​ ಜಾಗಕ್ಕೆ ಜೋ ಬಿಡೆನ್​ ಆಗಮಿಸಿದ್ದು, ಟ್ರಂಪ್​ರ ನಿಧಾನವಾಗಿ ಮರೆಯಾಗುತ್ತಿರುವಂತೆ ಭಾಸವಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...