alex Certify ಒಂದು ಗಂಟೆಗೂ ಅಧಿಕ ಕಾಲ ಗುಪ್ತ ಬಂಕರ್ ‌ನಲ್ಲಿದ್ದ ಅಮೆರಿಕಾ ಅಧ್ಯಕ್ಷ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಗಂಟೆಗೂ ಅಧಿಕ ಕಾಲ ಗುಪ್ತ ಬಂಕರ್ ‌ನಲ್ಲಿದ್ದ ಅಮೆರಿಕಾ ಅಧ್ಯಕ್ಷ…!

ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆ ಎಂಟು ನಿಮಿಷಗಳ ಕಾಲ ಅದುಮಿಟ್ಟಿದ್ದರು. ಇದರಿಂದ ಉಸಿರುಗಟ್ಟಿ ಜಾರ್ಜ್ ಮೃತಪಟ್ಟರು ಎಂದು ಹೇಳಲಾಗುತ್ತಿದೆ. ಇದಾದ ನಂತರ ಮಿನ್ನೆಸೋಟಾದಲ್ಲಿ ಆರಂಭವಾದ ಕಪ್ಪು ಜನರ ಪ್ರತಿಭಟನೆ ಅಮೆರಿಕದ 17 ರಾಜ್ಯಗಳಲ್ಲಿ ವ್ಯಾಪಿಸಿ ಭಾರೀ ಹಿಂಸಾಚಾರ ಮತ್ತು ಸಂಘರ್ಷಕ್ಕೆ ಕಾರಣವಾಗಿದೆ.

ಈ ಬೆನ್ನಲ್ಲೇ ನಿನ್ನೆ ಶ್ವೇತಭವನದ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಆಗಿದೆ. ಪ್ರತಿಭಟನೆಯಲ್ಲಿ 11 ಮೆಟ್ರೋಪಾಲಿಟನ್ ಪೊಲೀಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳೂ ಸೇರಿದಂತೆ 60 ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ಗಾಯಗೊಂಡರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರನ್ನು ಗುಪ್ತ ಬಂಕರ್‌ನಲ್ಲಿ ಅಡಗಿಸಿಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವೈಟ್ ಹೌಸ್‌ನ ಅಂಡರ್ ಗ್ರೌಂಡ್ ಬಂಕರ್‌ನಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಬಂಕರನ್ನು ವಿಪತ್ತಿನ ಕಾಲದಲ್ಲಿ ಬಳಕೆಯಾಗಲೆಂದೇ ನಿರ್ಮಿಸಲಾಗಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್‌ರನ್ನು ಸುರಕ್ಷತೆ ದೃಷ್ಟಿಯಿಂದ ಇದರೊಳಗೆ ಇರಿಸಲಾಗಿತ್ತಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...