alex Certify ದಂಗಾಗಿಸುತ್ತೆ ಹಣ ಉಳಿಸಲು ಹೊಟ್ಟೆ ಬಿರಿಯುವಂತೆ ತಿಂದ ಜೋಡಿ ಮಾಡಿದ ಕರಾಮತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಹಣ ಉಳಿಸಲು ಹೊಟ್ಟೆ ಬಿರಿಯುವಂತೆ ತಿಂದ ಜೋಡಿ ಮಾಡಿದ ಕರಾಮತ್ತು

ಹೊಟ್ಟೆ ಬಿರಿಯುವಂತೆ ತಿಂದು ಬಳಿಕ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದನ್ನು ಅನೇಕ ಬಾರಿ ನೋಡಿದ್ದೇವೆ. ಆದರೆ ಇಲ್ಲೊಂದು ಕಿಲಾಡಿ ಜೋಡಿ ತಿಂದ ಆಹಾರಕ್ಕೆ ಹಣ ನೀಡದೇ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಬಳಸಿರುವ ವಿಚಿತ್ರ ಘಟನೆ ನಡೆದಿದೆ.

ಹೌದು, ಯು.ಕೆ.ನಲ್ಲಿರುವ ಬ್ಲಾಕ್‌ಬರ್ನ್‌ನಲ್ಲಿ ಈ ಘಟನೆ ನಡೆದಿದ್ದು ವ್ಯಕ್ತಿಯೊಬ್ಬ ಜಾನ್ಸ್‌ ಬಿಬಿಕ್ಯೂನಲ್ಲಿ ಸುಮಾರು 67 ಯೂರೋ (6477 ರೂ.) ಮೌಲ್ಯದ ಆಹಾರವನ್ನು ಆರ್ಡರ್‌ ಮಾಡಿದ್ದಾರೆ. ಊಟ ಮುಗಿಸಿದ ಬಳಿಕ ವ್ಯಕ್ತಿ ತನ್ನ ಕೂದಲನ್ನು ಊಟದ ಪ್ಲೇಟಿನಲ್ಲಿರುವ ಆಹಾರದ ಮೇಲೆ ಹಾಕಿ ಹಣ ನೀಡುವುದಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಇದನ್ನು ನೋಡಿ ಅನುಮಾನಗೊಂಡು ಸಿ.ಸಿ ಕ್ಯಾಮರಾ ಚೆಕ್‌ ಮಾಡಿದಾಗ, ಇವರು ಮಾಡಿರುವ ಕರಾಮತ್ತು ಬೆಳಕಿಗೆ ಬಂದಿದೆ.

ಈ ಬಗ್ಗೆ ಹೊಟೇಲ್‌ ಮ್ಯಾನೇಜರ್‌ ಮಾತನಾಡಿದ್ದು, ಜಾನ್ಸ್‌ ಮೆಗಾ ಪ್ಲಟ್ಟರ್‌ ಅನ್ನು ಕೇವಲ ಇಬ್ಬರಿಗೆ ಆರ್ಡರ್‌ ಮಾಡಿದ್ದರು. 55 ಯೂರೋದ ಈ ಊಟ ಆರು ಜನರಿಗೆ ಆಗುತ್ತದೆ. ಆದರೆ ಇವರು ಇಬ್ಬರು ಇದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಊಟವನ್ನು ಏಕೆ ಆರ್ಡರ್‌ ಮಾಡುತ್ತಿದ್ದಾರೆ ಎನ್ನುವ ಅನುಮಾನ ಬಂದಿತ್ತು. ಬಳಿಕ ಡ್ರಿಂಕ್ಸ್‌ ಅನ್ನು ಆರ್ಡರ್‌ ಮಾಡಿದ್ದರು. ಬಳಿಕ ಪ್ಲೇಟ್ ‌ನಲ್ಲಿದ್ದ ಬಿರಿಯಾನಿ, ಕಬಾಬ್‌ ಹಾಗೂ ರೋಟಿಯಲ್ಲಿ ಕೂದಲು ಇತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವಿಷಯ ಬಹಿರಂಗವಾಯಿತು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...