ಕಾರಿನ ಇಂಜಿನ್ ಒಳಗೆ ಬರೋಬ್ಬರಿ 30 ನಿಮಿಷಗಳ ಕಾಲ ಸಿಲುಕಿದ್ದ ʼಡೀಸೆಲ್ʼ ಹೆಸರಿನ ನಾಯಿಯೊಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಚಲಿಸುತ್ತಿದ್ದ ಕಾರಿನ ಇಂಜಿನ್ ಒಳಗೆ ಈ ಶ್ವಾನವು ಸಿಲುಕಿಹಾಕಿಕೊಂಡಿತ್ತು.
18 ತಿಂಗಳ ಜಾಕ್ ರುಸೆಲ್ ತಳಿಯ ಶ್ವಾನದ ಮಾಲೀಕ ಹ್ಯುಂಡೈ ಎಸ್ಯುವಿಯಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತ್ಯದ ಎಕ್ಸ್ ಪ್ರೆಸ್ ವೇನಲ್ಲಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದರು. ಶ್ವಾನ ಕೂಗುತ್ತಿರುವ ಶಬ್ದ ಕೇಳುತ್ತಿದ್ದಂತೆಯೇ ದಂಪತಿ ಆಘಾತಕ್ಕೊಳಗಾಗಿದ್ದಾರೆ ಹಾಗೂ ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಓದುಗರನ್ನು ಭಾವುಕರನ್ನಾಗಿದೆ ಈ ಹೃದಯಸ್ಪರ್ಶಿ ಸ್ಟೋರಿ
ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ರು. ಆದರೆ ಯಾರು ಕೂಡ ಈ ಶ್ವಾನ ಬದುಕುಳಿಯುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಅದೃಷ್ಟವಶಾತ್ ಡಿಸೇಲ್ ಪ್ರಾಣಾಪಾಯದಿಂದ ಪಾರಾಗಿದೆ. ಹಾಗೂ ಇದೀಗ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಕೆದಾರರೊಬ್ಬರು ಕಾರಿನ ಗ್ಯಾಸ್ ಇಂಜಿನ್ಗೆ ಡೀಸೆಲ್ ಹಾಕಬೇಡಿ ಎಂದು ಹಾಸ್ಯ ಮಾಡಿದ್ದಾರೆ.