alex Certify ಕಾರಿನ ಇಂಜಿನ್​​ನೊಳಗೆ ಸಿಲುಕಿದ್ರೂ ಪವಾಡಸದೃಶ ರೀತಿಯಲ್ಲಿ ಪಾರಾಯ್ತು ಶ್ವಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಇಂಜಿನ್​​ನೊಳಗೆ ಸಿಲುಕಿದ್ರೂ ಪವಾಡಸದೃಶ ರೀತಿಯಲ್ಲಿ ಪಾರಾಯ್ತು ಶ್ವಾನ..!

ಕಾರಿನ ಇಂಜಿನ್​ ಒಳಗೆ ಬರೋಬ್ಬರಿ 30 ನಿಮಿಷಗಳ ಕಾಲ ಸಿಲುಕಿದ್ದ ʼಡೀಸೆಲ್ʼ​ ಹೆಸರಿನ ನಾಯಿಯೊಂದು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದೆ. ಚಲಿಸುತ್ತಿದ್ದ ಕಾರಿನ ಇಂಜಿನ್​ ಒಳಗೆ ಈ ಶ್ವಾನವು ಸಿಲುಕಿಹಾಕಿಕೊಂಡಿತ್ತು.

18 ತಿಂಗಳ ಜಾಕ್​ ರುಸೆಲ್​ ತಳಿಯ ಶ್ವಾನದ ಮಾಲೀಕ ಹ್ಯುಂಡೈ ಎಸ್ಯುವಿಯಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್​ ವೇಲ್ಸ್​ ಪ್ರಾಂತ್ಯದ ಎಕ್ಸ್​ ಪ್ರೆಸ್​ ವೇನಲ್ಲಿ ಗಂಟೆಗೆ 100 ಕಿಲೋಮೀಟರ್​ ವೇಗದಲ್ಲಿ ಚಲಿಸುತ್ತಿದ್ದರು. ಶ್ವಾನ ಕೂಗುತ್ತಿರುವ ಶಬ್ದ ಕೇಳುತ್ತಿದ್ದಂತೆಯೇ ದಂಪತಿ ಆಘಾತಕ್ಕೊಳಗಾಗಿದ್ದಾರೆ ಹಾಗೂ ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ಓದುಗರನ್ನು ಭಾವುಕರನ್ನಾಗಿದೆ ಈ ಹೃದಯಸ್ಪರ್ಶಿ ಸ್ಟೋರಿ

ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ರು. ಆದರೆ ಯಾರು ಕೂಡ ಈ ಶ್ವಾನ ಬದುಕುಳಿಯುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಅದೃಷ್ಟವಶಾತ್​ ಡಿಸೇಲ್​ ಪ್ರಾಣಾಪಾಯದಿಂದ ಪಾರಾಗಿದೆ. ಹಾಗೂ ಇದೀಗ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಳಕೆದಾರರೊಬ್ಬರು ಕಾರಿನ ಗ್ಯಾಸ್​ ಇಂಜಿನ್​ಗೆ ಡೀಸೆಲ್​ ಹಾಕಬೇಡಿ ಎಂದು ಹಾಸ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...