ಪಕ್ಷಿಗಳಿಗೆ ಫೀಡಿಂಗ್ ಮಾಡುವ ವಸ್ತುವೊಂದನ್ನು ಕತ್ತಿಗೆ ತಗಲುಹಾಕಿಕೊಂಡು ಪರದಾಡುತ್ತಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸುತ್ತಿರುವ ಚಿತ್ರಗಳು ಟ್ವಿಟರ್ನಲ್ಲಿ ವೈರಲ್ ಆಗಿವೆ.
ಅಮೆರಿಕದ ಕೊಲರಾಡೋ ವನ್ಯಧಾಮದಲ್ಲಿ ಈ ಘಟನೆ ಜರುಗಿದ್ದು, ಅರಣ್ಯ ಸೇವೆ ಅಧಿಕಾರಿ ಜೋ ನಿಕೋಲ್ಸನ್, ಬಹಳ ಶ್ರಮಪಟ್ಟು ಜಿಂಕೆಯನ್ನು ಫೀಡರ್ನಿಂದ ರಕ್ಷಿಸುತ್ತಿರುವ ಚಿತ್ರವನ್ನು ವನ್ಯಜೀವಿಧಾಮ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಜಿಂಕೆಯ ತಲೆಯಿಂದ ಫೀಡರ್ ಅನ್ನು ಬಲೇ ನಾಜೂಕಾಗಿ ಹೊರತೆಗೆದ ಅಧಿಕಾರಿಯ ಬದ್ಧತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.