alex Certify ಹಾಲು ಖರೀದಿಸಿದವರಿಗೆ ಶಾಕ್‌ ನೀಡಿದೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲು ಖರೀದಿಸಿದವರಿಗೆ ಶಾಕ್‌ ನೀಡಿದೆ ಈ ವಿಡಿಯೋ…!

ಡೈರಿ ಕೇಂದ್ರದಲ್ಲಿನ ಬಾತ್​​ ಟಬ್​ನಲ್ಲಿ ಮಲಗಿ ಹಾಲಿನಿಂದ ಸ್ನಾನ ಮಾಡಿದವನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಡೈರಿ ಕೆಲಸಗಾರನನ್ನ ಪೊಲೀಸರು ಬಂಧಿಸಿದ ಘಟನೆ ಟರ್ಕಿಯಲ್ಲಿ ನಡೆದಿದೆ. ಉಗುರ್​ ಟಟ್ಗಟ್​​ ಎಂಬಾತ ನೀರಿನ ಬದಲು ಹಾಲಿನಿಂದ ತುಂಬಿದ್ದ ಟಬ್​ನಲ್ಲಿ ಮಲಗಿದ್ದ. ಅಲ್ಲದೇ ಚೊಂಬಿನಲ್ಲಿ ಹಾಲನ್ನ ತೆಗೆದುಕೊಂಡು ತಲೆಯನ್ನ ತೊಳೆದುಕೊಂಡಿದ್ದ.

ವಿಡಿಯೋ ವೈರಲ್​ ಆದ ಬಳಿಕ ತನಿಖೆ ಕೈಗೆತ್ತಿಕೊಂಡ ಸ್ಥಳೀಯ ಠಾಣೆ ಪೊಲೀಸರು ಈತನನ್ನ ಬಂಧಿಸೋದ್ರ ಜೊತೆಗೆ ಹಾಲಿನ ಕೇಂದ್ರ ಹಾಗೂ ಇಬ್ಬರು ಕಾರ್ಮಿಕರಿಗೆ ದಂಡ ವಿಧಿಸಿದ್ದಾರೆ. ಹಾಗೂ ಡೈರಿಯನ್ನ ಸೀಝ್​ ಮಾಡಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಟರ್ಕಿಯ ಕೃಷಿ ಹಾಗೂ ಅರಣ್ಯ ಸಚಿವಾಲಯ, ಕೀನ್ಯಾದಲ್ಲಿನ ಡೈರಿ ಕೇಂದ್ರವೊಂದರಲ್ಲಿ ಆಹಾರ ಸುರಕ್ಷತೆಯನ್ನ ಕಡೆಗಣಿಸಿದ್ದು ಕಂಡುಬಂದಿದೆ, ಈ ಸಂಬಂಧ ಸೂಕ್ತ ಕ್ರಮ ಕೈಗೊಂಡಿದ್ದೇವೆ ಅಂತಾ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...