alex Certify ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಲಂಡನ್: ಇದೊಂದು ಮಾನವೀಯ ಮೌಲ್ಯವನ್ನು ಸಾರುವ ಸುದ್ದಿ. ವ್ಯಕ್ತಿಯೊಬ್ಬ ಅಪರಿಚಿತ ನಾಯಿಯ ರಕ್ಷಣೆಗೋಸ್ಕರ ಸುಮಾರು ಗಂಟೆ ಕಾಲ ಅದರ ಹಿಂದೆ ಸೈಕಲ್ ಹೊಡೆದು, ಕೊನೆಗೆ ಅದನ್ನು ಸುರಕ್ಷಿತವಾಗಿ ಮಾಲೀಕರ ಕೈಗೆ ಒಪ್ಪಿಸಿದ ಘಟನೆ ಲಂಡನ್ ನಲ್ಲಿ ನಡೆದಿದೆ.

ರೂಬೆನ್ ಮೆಕ್ಕರ್ಟ್ನಿ ಎಂಬ ಸೈಕಲ್ ಪಟು ಈ ರೀತಿಯಾಗಿ ಮಾನವೀಯತೆ ಮೆರೆದಿದ್ದಾರೆ. ಎರಡನೇ ಅವಧಿಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಮ್ ಬಾಗಿಲು ಹಾಕಿದ್ದರಿಂದ ಫಿಟ್ನೆಸ್ ಕಾಪಾಡಿಕೊಳ್ಳಲು ಸೈಕಲ್ ಸವಾರಿ ಮಾಡುತ್ತಿದ್ದರು. ಈ ವೇಳೆ ದಾರಿ ಮಧ್ಯದಲ್ಲಿ ಶ್ವಾನವೊಂದು ದಿಕ್ಕೆಟ್ಟು ಓಡಾಡುತ್ತಿರುವುದು ಕಂಡಿದೆ.

ನಾಯಿಯ ಗೊಂದಲವನ್ನು ಅರ್ಥ ಮಾಡಿಕೊಂಡ ರೂಬೆನ್ ಅದೆಲ್ಲಿಯಾದರೂ ಟ್ರಾಫಿಕ್ ನಲ್ಲಿ ವಾಹನಗಳಡಿ ಸಿಲುಕಿದರೆ ಎಂಬ ಆತಂಕದಿಂದ ಸುಮಾರು ಒಂದು ಗಂಟೆಗಳ ಕಾಲ ಲಂಡನ್ ನ ನಗರದ ಮಧ್ಯದ ಮಾರ್ಗಗಳಲ್ಲಿ ಹಿಂಬಾಲಿಸಿದ್ದಾರೆ. ಕೊನೆಗೂ ಆ ನಾಯಿಗೆ ದಾರಿ ಕಾಣದಾದಾಗ ಅದರ ಕತ್ತಿನಲ್ಲಿ ನೇತುಹಾಕಿದ್ದ ನಂಬರ್ ಗೆ ಕರೆ ಮಾಡಿ ವಿಳಾಸ ಪಡೆದು ಮನೆಗೆ ಮುಟ್ಟಿಸಿದ್ದಾರೆ. ಈಗ ರೂಬೆನ್ ಮಾನವೀಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...