alex Certify ಏಕಾಂಗಿಯಾಗಿ ಕುಳಿತು ಕೇಕ್‌ ತಿಂದವನ ಕಣ್ಣಲ್ಲಿ ನೀರೂರಿತ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಂಗಿಯಾಗಿ ಕುಳಿತು ಕೇಕ್‌ ತಿಂದವನ ಕಣ್ಣಲ್ಲಿ ನೀರೂರಿತ್ತು….!

ಕರೋನಾ ವೈರಸ್ ಕೇಂದ್ರ ವುಹಾನ್ ನಗರದಲ್ಲಿ ಫುಡ್ ಡಿಲೆವರಿ ಬಾಯ್
ಒಬ್ಬ ಏಕಾಂಗಿಯಾಗಿ ಕುಳಿತು ಅಳುತ್ತ ಬರ್ತಡೆ ಕೇಕ್ ತಿನ್ನುತ್ತಿರುವ ವಿಡಿಯೋ
ನೆಟ್ಟಿಗರ ಮನ ಕಲಕಿದೆ.

ಚೀನಾದ ಮಾಧ್ಯಮ ಸಂಸ್ಥೆ ಸಿಜಿಎನ್ ಟಿ ಯುಟ್ಯೂಬ್ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣ ವೈಬೊನಲ್ಲಿ ಸಾಕಷ್ಟು ವೈರಲ್ ಆಗಿದೆ.

ವುಹಾನ್ನಲ್ಲಿ ಮಹಾಮಾರಿ ಆವರಿಸಿಕೊಂಡಿದ್ದರಿಂದ ಸಂಪೂರ್ಣ ಲಾಕ್ ‌ಡೌನ್ ಆಗಿತ್ತು. ಆದರೆ, ಫುಡ್ ಡಿಲೆವರಿ ಬಾಯ್ ಗಳ ಕಾರ್ಯಭಾರ ಹೆಚ್ಚಿತ್ತು. ತುರ್ತು ಸೇವೆಯಾಗಿದ್ದರಿಂದ ಅವರಿಗೆ ಓಡಾಟಕ್ಕೆ ಅವಕಾಶವಿತ್ತು. ಡಿಲೆವರಿ ಬಾಯ್ ಗಳು ಹಲವು ಸವಾಲುಗಳನ್ನು ಎದುರಿಸಿಯೂ ಜನರ ಆಹಾರವನ್ನು ಮನೆಗಳಿಗೆ ತಲುಪಿಸುತ್ತಿದ್ದರು.

ಈ ನಡುವೆ ಏ.15 ರಂದು ಬಂದ ಫುಡ್‌ ಡಿಲೆವರಿ ಬಾಯ್ ತನ್ನ ಹುಟ್ಟು ಹಬ್ಬವನ್ನೂ‌ ಆಚರಿಸಿಕೊಳ್ಳಲಾಗಿರಲಿಲ್ಲ. ಜನರ ಹಸಿವು ನೀಗಿಸಲು ದುಡಿಯುವ ಡಿಲೆವರಿ ಬಾಯ್ ಹುಟ್ಟಿದ ದಿನಾಂಕ‌ ತಿಳಿದುಕೊಂಡ ಗ್ರಾಹಕರೊಬ್ಬರು ಕೇಕ್ ಆರ್ಡರ್ ಮಾಡಿ ಆತನಿಗೆ ಅಚ್ಚರಿ ಮೂಡಿಸಿದ್ದಾರೆ. ಆರ್ಡರ್ ಪಡೆದು ತಲುಪಿಸುವ ವಿಳಾಸ ನೋಡಿದ ಡಿಲೆವರಿ ಬಾಯ್ ಕಣ್ಣಲ್ಲಿ ನೀರೂರಿತ್ತು. ಕೇಕ್ ಪ್ಯಾಕ್ ಮೇಲೆ “ಕೇಕ್ ಡಿಲೆವರಿ ಮಾಡುವ ವ್ಯಕ್ತಿಗೆ ಉಡುಗೊರೆ. ಬದುಕು ಸುಲಭವಲ್ಲ. ನಿನ್ನ ಬಗ್ಗೆ ಕಾಳಜಿ ವಹಿಸು” ಎಂದು ಬರೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...