alex Certify 205 ಡಾಲರ್ ಬಿಲ್ ಗೆ ನೀಡಿದ ಟಿಪ್ಸ್ ನೋಡಿ ದಂಗಾದ ವೇಟರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

205 ಡಾಲರ್ ಬಿಲ್ ಗೆ ನೀಡಿದ ಟಿಪ್ಸ್ ನೋಡಿ ದಂಗಾದ ವೇಟರ್…!

ಪೆನ್ಸಲ್ವೇನಿಯಾ:ಕೋವಿಡ್ ಲಾಕ್ ಡೌನ್ ಎಲ್ಲ ರೀತಿಯ ಉದ್ಯಮಗಳನ್ನು ನೆಲಕ್ಕಚ್ಚಿಸಿದೆ. ಅದರಲ್ಲೂ ಹೋಟೆಲ್, ರೆಸ್ಟೊರೆಂಟ್ ಗಳ ಪರಿಸ್ಥಿತಿ ಯಾರಿಗೂ ಬೇಡ. ಅಮೆರಿಕಾದಲ್ಲೊಬ್ಬರು ಭಾರಿ ಪ್ರಮಾಣದ ಟಿಪ್ಸ್ ನೀಡಿ ಸಂಕಷ್ಟದಲ್ಲಿರುವ ರೆಸ್ಟೋರೆಂಟ್ ವೇಟರ್ ನ್ನು ಖುಷಿಪಡಿಸಿದ್ದಾರೆ‌.

ಅಮೆರಿಕಾ ಪೆನ್ಸಲ್ವೇನಿಯಾದ ಅಂಟೊನಿಸ್ ಎಟ್ ಪ್ಯಾಕ್ಸನ್ ಎಂಬ ಇಟಾಲಿಯನ್ ರೆಸ್ಟೋರೆಂಟ್ ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ವೇಟರ್ ನೀಡಿದ ಬಿಲ್ ನ ಪ್ರತಿಯನ್ನು ಪೋಸ್ಟ್ ಮಾಡಲಾಗಿದೆ. “ನಮ್ಮ ಸಿಬ್ಬಂದಿಗೆ ಅನಿರೀಕ್ಷಿತ ಬೆಂಬಲ. ಧನ್ಯವಾದ ಹೇಳುವುದನ್ನು ಬಿಟ್ಟರೆ ನಮಗೆ ಬೇರೆ ಶಬ್ದ ಬರುತ್ತಿಲ್ಲ. ಧನ್ಯವಾದ, ಧನ್ಯವಾದ, ಧನ್ಯವಾದ” ಎಂದು ರೆಸ್ಟೋರೆಂಟ್ ಖಾತೆಯಲ್ಲಿ ಬರೆಯಲಾಗಿದೆ.

205.94 ಡಾಲರ್ ಒಟ್ಟು ಬಿಲ್ ಆಗಿದೆ. ಅದಕ್ಕೆ 5 ಸಾವಿರ ಡಾಲರ್ ಟಿಪ್ ಸೇರಿಸಿ 5205 ಡಾಲರ್ ಗಳನ್ನು ಗ್ರಾಹಕ ನೀಡಿದ್ದಾಗಿ ಬಿಲ್ ನಲ್ಲಿ ಬರೆದಿದ್ದಾರೆ. ಜಿನ್ನಾ ಡಿ-ಎಂಜಲೊ ಟಿಪ್ ಪಡೆದ ಅದೃಷ್ಟವಂತೆ. ನೀಡಿದ ದಾನಶೂರ ಯಾರು ಎಂಬುದು ಮಾತ್ರ ತಿಳಿದಿಲ್ಲ. ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.

We have no words other than THANK YOU !!Unbelievable support for our staff here!! THANK YOU THANK YOU THANK YOU…

Posted by Anthony's at Paxon Hollow on Saturday, December 12, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...