alex Certify ಏಕಾಏಕಿ ರಸ್ತೆಗಿಳಿದ ಹಸುಗಳನ್ನು ನೋಡಿ ಜನರಿಗೆ ಗಾಬರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ರಸ್ತೆಗಿಳಿದ ಹಸುಗಳನ್ನು ನೋಡಿ ಜನರಿಗೆ ಗಾಬರಿ

ಯುಕೆಯ ಸೋಮರ್​ ಸೆಟ್​ ಕೌಂಟಿ ರಸ್ತೆಯಲ್ಲಿ ಹಸುಗಳು ಹಿಂಡು ಹಿಂಡಾಗಿ ಓಡಾಡಿದ್ದು ಜನರನ್ನ ದಿಗ್ಭ್ರಮೆಗೊಳಪಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡ್ತಾ ಇದೆ.

ಅಕ್ಟೋಬರ್​ 24ರ ರಾತ್ರಿ ಈ ಘಟನೆ ನಡೆದಿದ್ದು ಬರೋಬ್ಬರಿ 85 ಹಸುಗಳು ಚಾರ್ಡ್​ ಪಟ್ಟಣದಲ್ಲಿರುವ ಫೀನಿಕ್ಸ್ ಹೋಟೆಲ್​ ಹಿಂದೆ ಓಡಿ ಹೋಗಿದ್ದಾವೆ ಅಂತಾ ಪತ್ರಿಕೆಯೊಂದು ವರದಿ ಮಾಡಿದೆ. ಹೋಟೆಲ್​ನ ಸಿಸಿ ಕ್ಯಾಮರದಲ್ಲಿ ಹಸುಗಳ ಹಿಂಡು ಈ ರೀತಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ.

ಈ ವಿಚಾರ ತಿಳೀತಾ ಇದ್ದಂತೆ ಅಲರ್ಟ್​ ಆದ ಪೊಲೀಸರು ಸ್ಥಳೀಯರ ಸಹಾಯದಿಂದ ಹಸುಗಳ ಹಿಂಡನ್ನ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದಾರೆ. ಆದರೆ ಈ ಹಸುಗಳು ಎಲ್ಲಿಂದ ಬಂದಿದ್ದಾವೆ ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...