ಹೊಸ ರೋಗಿಗಳಿಗೆ ಬೆಡ್ ನೀಡಬೇಕೆಂದು ಆಸ್ಪತ್ರೆಯಲ್ಲಿ ಮೊದಲೇ ಅಡ್ಮಿಟ್ ಆಗಿದ್ದ ಇಬ್ಬರು ಕೊರೊನಾ ಸೋಂಕಿತ ವೃದ್ಧರನ್ನ ಉದ್ದೇಶ ಪೂರ್ವಕವಾಗಿ ಸಾಯಿಸಿದ ಆರೋಪದ ಹಿನ್ನೆಲೆ ಇಟಲಿಯಲ್ಲಿ ವೈದ್ಯನೊಬ್ಬನನ್ನ ಬಂಧಿಸಲಾಗಿದೆ.
47 ವರ್ಷದ ವೈದ್ಯ ಮಾರ್ಚ್ ತಿಂಗಳಲ್ಲಿ ಕೊರೊನಾ ವೈರಸ್ ಮೊದಲ ಅಲೆ ವ್ಯಾಪಕವಾಗಿ ಇದ್ದ ವೇಳೆ 61 ವರ್ಷದ ನಟಾಲ್ ಬಾಸ್ಸಿ ಹಾಗೂ 80 ವರ್ಷದ ಏಂಜೆಲೋ ಪ್ಯಾಲೆಟ್ಟಿ ಎಂಬವರಿಗೆ ಮಿತಿಮೀರಿದ ಡೋಸ್ನ ಅರವಳಿಕೆ ನೀಡಿದ್ದರು ಎಂಬ ಆರೋಪ ಎದುರಾಗಿದೆ. ಲೊಂಬಾರ್ಡಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಅರಬ್ ರಾಷ್ಟ್ರಗಳಿಂದ ವಿಮಾನ ಪ್ರಯಾಣ ನಿಷೇಧಿಸಿದ ಬ್ರಿಟನ್
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೊರೊನಾ ರೋಗಿಗಳನ್ನ ನಿಭಾಯಿಸಲು ಆಸ್ಪತ್ರೆಗಳು ಹೆಣಗಾಡುತ್ತಿದ್ದವು. ಈ ವೇಳೆ ಆಸ್ಪತ್ರೆ ಬೆಡ್ ಖಾಲಿ ಮಾಡಬೇಕು ಎಂಬ ಉದ್ದೇಶದಿಂದ ಆರೋಪಿ ವೈದ್ಯ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.