alex Certify SHOCKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ ಭಾರತ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌-19ಗೆ ಹೊಸದಾಗಿ 1,68,912 ಮಂದಿ ಸೋಂಕಿತರಾಗುವ ಮೂಲಕ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ‌ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.

ಇದೇ ಅವಧಿಯಲ್ಲಿ 904 ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ1,70,709 ತಲುಪಿದೆ.

ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್: ಬೆಚ್ಚಿಬೀಳಿಸುವಂತಿದೆ ʼಝೀರೋ ಬ್ಯಾಲೆನ್ಸ್ʼ ಖಾತೆದಾರರಿಂದ SBI ವಸೂಲಿ ಮಾಡಿರುವ ಸೇವಾ ಶುಲ್ಕ

ಭಾರತದಲ್ಲಿ ಒಟ್ಟಾರೆ ಕೋವಿಡ್-19 ಸೋಂಕಿತರ ಸಂಖ್ಯೆಯು 1.35 ಕೋಟಿ ತಲುಪಿದ್ದು, ಬ್ರೆಜಿಲ್‌ನ 1.34 ಕೋಟಿಯ ದಾಖಲೆಯನ್ನು ಹಿಂದಿಕ್ಕಿದೆ. 3.12 ಕೋಟಿ ಸೋಂಕಿತರ ಸಂಖ್ಯೆ ಇರುವ ಅಮೆರಿಕ ಕೋವಿಡ್‌-19 ವೈರಾಣುವಿನ ಅತ್ಯಂತ ಬಾಧಿತ ದೇಶವಾಗಿದೆ.

ಸೆಪ್ಟೆಂಬರ್‌ 7, 2020ರ ಒಂದೇ ದಿನ 90,000+ ಹೊಸ ಕೇಸುಗಳನ್ನು ಕಂಡು, ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರತವು ಬ್ರೆಜಿಲ್ ‌ಅನ್ನು ಹಿಂದಿಕ್ಕಿತ್ತು. ಇದೀಗ ಕೋವಿಡ್‌-19ನ ಎರಡನೇ ಅಲೆಯ ಗಂಭೀರತೆ ಹೆಚ್ಚಾಗಿದ್ದು, ಏಪ್ರಿಲ್‌ 5ರಿಂದ ಆಚೆಗೆ ಪ್ರತಿನಿತ್ಯ ಭಾರತದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...