alex Certify 25 ದಿನ ಸಮುದ್ರ ಪ್ರವಾಸದಲ್ಲಿದ್ದ ಜೋಡಿ ದಡಕ್ಕೆ ಬರ್ತಿದ್ದಂತೆ ದಂಗು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ದಿನ ಸಮುದ್ರ ಪ್ರವಾಸದಲ್ಲಿದ್ದ ಜೋಡಿ ದಡಕ್ಕೆ ಬರ್ತಿದ್ದಂತೆ ದಂಗು…!

ಇಡೀ ವಿಶ್ವ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಆದ್ರೆ ಆ ದಂಪತಿಗೆ ಇದ್ರ ಪರಿವೇ ಇರಲಿಲ್ಲ. ಸಮುದ್ರ ಪ್ರವಾಸವನ್ನು ಎಂಜಾಯ್ ಮಾಡ್ತಿದ್ದ ಜೋಡಿ ಪ್ರವಾಸ ನಿಲ್ಲಿಸಿ ದಡಕ್ಕೆ ಬಂದಾಗ ಶಾಕ್ ಆಗಿದ್ದಾರೆ.

ಯುಕೆ ಮ್ಯಾಂಚೆಸ್ಟರ್‌ನ ರಿಯಾನ್ ಓಸ್ಬೋರ್ನ್ ತನ್ನ ಪತ್ನಿ ಎಲೆನಾ ಜೊತೆ ಸಮುದ್ರ ಪ್ರವಾಸಕ್ಕೆ ಪ್ಲಾನ್ ಮಾಡಿದ್ದ. ಹಾಗಾಗಿ ಹಣ ಸಂಗ್ರಹಿಸಿ, ವಿಹಾರ ನೌಕೆ ಖರೀದಿಸಿ ಕೆಲಸ ಬಿಟ್ಟಿದ್ದಾನೆ. ನಂತ್ರ ಇಬ್ಬರೂ ಪ್ರವಾಸ ಕೈಗೊಂಡಿದ್ದಾರೆ.

ಫೆಬ್ರವರಿ ಕೊನೆಯ ವಾರದಲ್ಲಿ ಕ್ಯಾನರಿ ದ್ವೀಪದಿಂದ ತಮ್ಮ ಪ್ರಯಾಣ ಪ್ರಾರಂಭಿಸಿದ್ದರು. ಕ್ಯಾನರಿ ದ್ವೀಪವು ವಾಯುವ್ಯ ಆಫ್ರಿಕಾದ ಗಡಿಯಲ್ಲಿರುವ ಅಟ್ಲಾಂಟಿಕ್ ಮಹಾಸಾಗರದಲ್ಲಿದೆ. ಇಲ್ಲಿ ರಿಯಾನ್ ಮತ್ತು ಎಲೆನಾ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಬ್ರೆಜಿಲ್ ನ ಉತ್ತರ ಪ್ರದೇಶದಲ್ಲಿರುವ ಸೇಂಟ್ ವಿನ್ಸೆಂಟ್ ದ್ವೀಪಕ್ಕೆ ಹೋಗಬೇಕಾಗಿತ್ತು.

ರಜೆಯಲ್ಲಿ ಕೆಟ್ಟ ಸುದ್ದಿ ಕೇಳಬಾರದು ಎಂಬ ನಿರ್ಧಾರದೊಂದಿಗೆ ಹೋಗಿದ್ದ ಅವರಿಗೆ ಕೊರೊನಾ ಬಗ್ಗೆ ಯಾರೂ ಮಾಹಿತಿ ನೀಡಿರಲಿಲ್ಲ. ಪ್ರವಾಸ ಮುಗಿಸಿ ವಾಪಸ್ ಬಂದವರು ಕೊರೊನಾ ಸುದ್ದಿ ಕೇಳಿ ದಂಗಾಗಿದ್ದಾರೆ. ಅವರು ಹೋಗಬೇಕಾದ ಜಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. 25 ದಿನಗಳ ಕಾಲ ಸಮುದ್ರದಲ್ಲಿದ್ದವರು ಕೊನೆಯಲ್ಲಿ ಸೇಂಟ್ ವಿನ್ಸೆಂಟ್ ಗೆ ಬರಲು ಅನುಮತಿ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...